ಪೋಪ್ ಫ್ರಾನ್ಸಿಸ್: ವಲಸಿಗರು ನಮಗೆ ಸೋದರತ್ವದ ಕನಸನ್ನು ರೂಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ

ವಿಶ್ವಗುರು ಫ್ರಾನ್ಸಿಸ್ ಅವರು ಫಾದರ್ ಮತ್ತಿಯ ಫೆರಾರಿ ಅವರ ಪುಸ್ತಕ "ಸೇವ್ಡ್ ಬೈ ಮೈಗ್ರಾಂಟ್ಸ್" ಎಂಬ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದು, ತಮ್ಮ ಮುನ್ನುಡಿಯಲ್ಲಿ ವಲಸಿಗರ ಸಂಕಷ್ಟಗಳು ಹಾಗೂ ಬದುಕನ್ನು ಅರಸಿಕೊಂಡು ತಮ್ಮ ತಾಯಿನಾಡನ್ನು ಬಿಟ್ಟು ಅವರು ಅನುಭವಿಸುವ ಪಾಡುಗಳ ಕುರಿತು ಬರೆದಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು ಫ್ರಾನ್ಸಿಸ್ ಅವರು ಫಾದರ್ ಮತ್ತಿಯ ಫೆರಾರಿ ಅವರ ಪುಸ್ತಕ "ಸೇವ್ಡ್ ಬೈ ಮೈಗ್ರಾಂಟ್ಸ್" ಎಂಬ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದು, ತಮ್ಮ ಮುನ್ನುಡಿಯಲ್ಲಿ ವಲಸಿಗರ ಸಂಕಷ್ಟಗಳು ಹಾಗೂ ಬದುಕನ್ನು ಅರಸಿಕೊಂಡು ತಮ್ಮ ತಾಯಿನಾಡನ್ನು ಬಿಟ್ಟು ಅವರು ಅನುಭವಿಸುವ ಪಾಡುಗಳ ಕುರಿತು ಬರೆದಿದ್ದಾರೆ.

"ನಾನು ವಿಶ್ವಗುರುವಾಗಿ ಪ್ರೇಷಿತಾಧಿಕಾರವನ್ನು ವಹಿಸಿಕೊಂಡ ಕ್ಷಣದಿಂದ ಈವರೆಗೂ ಸಹ ನಮ್ಮ ಸಹೋದರರಾದ ವಲಸಿಗರ ಕುರಿತು ಮಾತನಾಡುತ್ತಲೇ ಬಂದಿದ್ದೇನೆ. ಉತ್ತಮ ಜೀವನವನ್ನು ಅರಸಿ, ತಮ್ಮ ಕುಟುಂಬಗಳು ಬಂದು ಮಿತ್ರರು ಹಾಗೂ ತಾಯಿ ನೆಲವನ್ನು ಬಿಟ್ಟು ಸಾಗರಗಳನ್ನು ದಾಟಿ ಅವರು ಹೊಸ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ತಮ್ಮ ಈ ಪ್ರಯಾಣದಲ್ಲಿ ಅವರು ಅನುಭವಿಸುವ ಸಂಕಷ್ಟಗಳನ್ನು ಹೇಳಲು ಪದಗಳು ಸಾಲುವುದಿಲ್ಲ. ಬಹುತೇಕ ಬಾರಿ ಎಲ್ಲಾ ದೇಶಗಳು ಅಥವಾ ಎಲ್ಲಾ ರಾಜಕೀಯ ನಾಯಕರುಗಳು ಅವರನ್ನು ಸಮಸ್ಯೆಯಾಗಿ ಅಥವಾ ತಮ್ಮ ಲಾಭಕ್ಕಾಗಿ ನೋಡುತ್ತಾರೆ ಅಥವಾ ಬಳಸಿಕೊಳ್ಳುತ್ತಾರೆ." ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, "ವಲಸಿಗರು ಬೇರೆ ಯಾವುದೋ ಗ್ರಹದಿಂದ ಬಂದ ಅಪರಿಚಿತರಲ್ಲ. ಬದಲಿಗೆ ಅವರು ಸಹ ನಮ್ಮಂತೆ ಮನುಷ್ಯರು. ಅವರೆಲ್ಲರೂ ಇಂದು ನಮ್ಮನ್ನು ಅವರನ್ನು ಸಹೋದರ ಸಹೋದರಿಯರನ್ನಾಗಿ ಪರಿಗಣಿಸಲು ವಿನಂತಿಸಿಕೊಳ್ಳುತ್ತಿದ್ದಾರೆ. ಅವರಲ್ಲೂ ಸಮಸ್ಯೆಾತ್ಮಕ ದೃಷ್ಟಿಯಿಂದ ನೋಡುವುದು ತಪ್ಪು. ಅವರು ಸಹ ದೇವರ ಮಕ್ಕಳಾಗಿರುವುದರಿಂದ ನಾವೆಲ್ಲರೂ ಸಹೋದರ ಸಹೋದರಿಯರಾಗುತ್ತೇವೆ." ಎಂದು ವಿಶ್ವಗುರು ಫ್ರಾನ್ಸಿಸ್ ಈ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ರೀತಿ ವಿಶ್ವಗುರು ಫ್ರಾನ್ಸಿಸ್, ಈಗಾಗಲೇ ವಲಸಿಗರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಕಥೋಲಿಕ ಸಂಘಟನೆಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು, ಧರ್ಮಾಧ್ಯಕ್ಷರು ಹಾಗೂ ಶ್ರೀಸಾಮಾನ್ಯ ಕಥೋಲಿಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

22 September 2024, 15:51