ಅಬ್ರಹಾಮಿಕ್ ಫ್ಯಾಮಿಲಿ ಹೌಸ್ ಪ್ರತಿನಿಧಿಗಳನ್ನು ಸ್ವಾಗತಿಸಿದ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಅಬ್ರಹಾಮಿಕ್ ಫ್ಯಾಮಿಲಿ ಹೌಸ್ ನ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಮಾನವ ಸೋದರತೆಯಲ್ಲಿ ನಡೆಯುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಅವರ ಕಾರ್ಯಕ್ಕೆ ಪ್ರೋತ್ಸಾಹಿಸಿದರು.
ಈ ಮನೆ ಅಥವಾ ಹೌಸ್ ಎಂಬುದು ಒಂದು ರೀತಿಯ ಕಟ್ಟಡವಾಗಿದ್ದು, ಒಂದೇ ಸಮಯದಲ್ಲಿ ಯೆಹೂದ್ಯ ಪ್ರಾರ್ಥನಾ ಮಂದಿರ, ಚರ್ಚ್ ಹಾಗೂ ಮಸೀದಿಯನ್ನು ಹೊಂದಿದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಬುಧಾಭಿ ನಗರದಲ್ಲಿದೆ. ಇದು ಅಂತರ್ ಧರ್ಮೀಯ ಸಹಯೋಗ ಹಾಗೂ ಸಹಕಾರವನ್ನು ಸೂಚಿಸಿದ್ದು, ಎಲ್ಲಾ ಧರ್ಮಗಳು ಸೋದರತ್ವವನ್ನು ಸಾರುತ್ತದೆ ಎಂಬ ಸಂದೇಶವನ್ನು ಹೇಳುತ್ತದೆ.
ಈ ಅಬ್ರಹಾಮಿಕ್ ಫ್ಯಾಮಿಲಿ ಹೌಸ್ ಅಧ್ಯಕ್ಷ ಮಹಮದ್ ಅಲ್ ಮುಬಾರಕ್ ಅವರ ಅಧ್ಯಕ್ಷದಲ್ಲಿ ಆಗಮಿಸಿದ್ದ ನಿಯೋಗಕ್ಕೆ ಪೋಪ್ ಫ್ರಾನ್ಸಿಸ್ ಅವರು ಅಂತರ್ ಧರ್ಮೀಯ ಶಾಂತಿ ಸಂವಾದವನ್ನು ಉತ್ತೇಜಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದು ಹೇಳಿದರು. ಅವರ ಈ ಕಾರ್ಯವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವ್ಯಾಟಿಕನ್ ಅಂತರ್-ಧರ್ಮೀಯ ಸಂವಾದ ಪೀಠದ ಅಧಿಕಾರಿಗಳೂ ಸಹ ಹಾಜರಿದ್ದರು.