ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ವಿಶ್ವಾಸ ಮತ್ತು ಭರವಸೆಯಿಂದ ಯೇಸುವಿನ ಬಳಿಗೆ ಹಿಂತಿರುಗಿರಿ

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ವಿಶ್ವಾಸ ಹಾಗೂ ಭರವಸೆಯಿಂದ ಯೇಸುವಿನ ಬಳಿಗೆ ಹಿಂತಿರುಗಿ ಎಂದು ಹೇಳಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ವಿಶ್ವಾಸ ಹಾಗೂ ಭರವಸೆಯಿಂದ ಯೇಸುವಿನ ಬಳಿಗೆ ಹಿಂತಿರುಗಿ ಎಂದು ಹೇಳಿದರು.

ಇಂದಿನ ಮಾರ್ಕನ ಶುಭ ಸಂದೇಶದಲ್ಲಿ ಯೇಸು ಕ್ರಿಸ್ತರು ತಿಮಾಯನ ಮಗ ಬಾರ್ ತಿಮಾಯನಿಗೆ ದೃಷ್ಟಿದಾನವನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ನೋಡಿದ್ದು ಬಾರ್ ತಿಮಾಯನ ವಿಶ್ವಾಸವನ್ನು. ಯೇಸುವನ್ನು ಕಾಣದೆಯೇ ಅವನು ಅವರಲ್ಲಿ ಅಪಾರ ವಿಶ್ವಾಸವನ್ನು ಇಟ್ಟಿದ್ದನು. ದೃಷ್ಟಿ ಬಂದ ತಕ್ಷಣ ಆತ ಎಲ್ಲವನ್ನೂ ಎಸೆದು, ತೊರೆದು ಯೇಸುವನ್ನು ಹಿಂಬಾಲಿಸಿದನು.

ಇದೇ ಸಂದರ್ಭದಲ್ಲಿ ಯೇಸು "ನಿನ್ನ ವಿಶ್ವಾಸವೇ ನಿನ್ನನ್ನು ಗುಣಪಡಿಸಿದೆ" ಎಂದು ಹೇಳಿದ್ದಾರೆ. ಹಾಗಾಗಿ, ನಮ್ಮ ವಿಶ್ವಾಸ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದೇ ವಿಶ್ವಾಸದಿಂದ ನಾವು ಯೇಸುವಲ್ಲಿಗೆ ಹಿಂತಿರುಗಬೇಕು ಎಂದು ಹೇಳಿದ್ದಾರೆ.

ನಾವು ನಮ್ಮದೇ ಪ್ರಾಪಂಚಿಕ ವಿಷಯಗಳನ್ನು ತೊರೆದು ಬಾರ್ ತಿಮಾಯನಂತೆ ಯೇಸುವನ್ನು ಹಿಂಬಾಲಿಸಬೇಕು.      

27 October 2024, 16:03