ಕಾರ್ಡಿನಲ್ ಯೂಜೆನಿಯೋ ಡಲ್ ಕೋರ್ಸೋ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ವಿಶ್ವಗುರು ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಅಂಗೋಲದ ಬೆಂಗುವೆಲ್ಲ ಧರ್ಮ ಕ್ಷೇತ್ರದ ನಿವೃತ್ತ ಧರ್ಮಧ್ಯಕ್ಷರಾಗಿದ್ದ ಕಾರ್ಡಿನಲ್ ಯುಜೇನಿಯೋ ಡಲ್ ಕೊರ್ಸೋ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಅವರು, ಕಾರ್ಡಿನಲ್ ಅವರ ಕುಟುಂಬಕ್ಕೆ ಹಾಗೂ ಸ್ಥಳೀಯ ಧರ್ಮಸಭೆಗೆ ಸಾಂತ್ವನದ ನುಡಿಗಳನ್ನು ಹೇಳಿದ್ದಾರೆ.

"ಕಾರ್ಡಿನಲ್ ಅವರ ನಿಧನ ನನ್ನ ಹೃದಯವನ್ನು ಕದಲಿಸಿದೆ. ಅವರು ಇಟಲಿ ಹಾಗೂ ಅರ್ಜೆಂಟೀನಾ ಮತ್ತು ಅಂಗೋಲ ದೇಶಗಳಲ್ಲಿ ವಿಶ್ವಾಸ ಯುಕ್ತ ಸುವಾರ್ತ ಪ್ರಸಾರಕರಾಗಿದ್ದರು" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಅವರ ಕುರಿತು ಮಾತನಾಡಿದ್ದಾರೆ.
ಕಾರ್ಡಿನಲ್ ಯುಜೇನಿಯೋ ಡಲ್ ಕೊರ್ಸೋ ಅವರು ಸುವಾರ್ತ ಪ್ರಸಾರಕರಾಗಿ ಅರ್ಜೆಂಟೀನಾ ಹಾಗೂ ಅಂಗೋಲ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೂಲತ ಇಟಲಿಯವರಾದ ಇವರು ತಮ್ಮ ಜೀವನದ ಬಹುತೇಕ ಸಮಯವನ್ನು ಶುಭ ಸಂದೇಶ ಪ್ರಸಾರಕರಾಗಿ ಈ ದೇಶಗಳಲ್ಲಿ ಕಳೆದಿದ್ದಾರೆ. ವಿಶ್ವಗುರು ಎರಡನೇ ಜಾನ್ ಪೌಲ್ ಅವರು ಇವರನ್ನು ಸೌರಿಮೋ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದರು. ತದ ನಂತರ ಇವರನ್ನು ಬೆಂಗಿಯೇಲ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರನ್ನಾಗಿ ವಿಶ್ವಗುರು ಹದಿನಾರನೇ ಬೆನೆಡಿಕ್ಟ್ ಅವರು ನೇಮಿಸಿದ್ದರು.