ಪೋಪ್: ಫಾದರ್ ಗುಸ್ಟಾವೋ ಗುತಿಯೆರೆಝ್ ಧರ್ಮಸಭೆಯ ಮಹಾನ್ ವ್ಯಕ್ತಿಗಳಲ್ಲೊಬ್ಬರು

ಇತ್ತೀಚೆಗಷ್ಟೇ ನಿಧನರಾದ ಪ್ರಖ್ಯಾತ ದೈವಶಾಸ್ತ್ರಜ್ಞರಾದ ಫಾದರ್ ಗುಸ್ಟಾವೊ ಗುತಿಯೆರೆಝ್ ಅವರ ನಿಧನಕ್ಕೆ ಕಂಬನಿಯನ್ನು ಮಿಡಿದಿರುವ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು, ಗುಸ್ಟಾವೊ ಗುತಿಯೆರೆಝ್ ಅವರು ವಿಮೋಚನಾ ದೈವಶಾಸ್ತ್ರ (Liberation Theology) ಯ ಸ್ಥಾಪಕರಾಗಿದ್ದು, ಅದಕ್ಕೆ ಮಹಾನ್ ಕೊಡುಗೆಯನ್ನು ನೀಡಿದ್ದಾರೆ. ಅವರು ಧರ್ಮಸಭೆ ಕಂಡ ಮಹಾ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಇತ್ತೀಚೆಗಷ್ಟೇ ನಿಧನರಾದ ಪ್ರಖ್ಯಾತ ದೈವಶಾಸ್ತ್ರಜ್ಞರಾದ ಫಾದರ್ ಗುಸ್ಟಾವೊ ಗುತಿಯೆರೆಝ್ ಅವರ ನಿಧನಕ್ಕೆ ಕಂಬನಿಯನ್ನು ಮಿಡಿದಿರುವ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು, ಗುಸ್ಟಾವೊ ಗುತಿಯೆರೆಝ್ ಅವರು ವಿಮೋಚನಾ ದೈವಶಾಸ್ತ್ರ (Liberation Theology) ಯ ಸ್ಥಾಪಕರಾಗಿದ್ದು, ಅದಕ್ಕೆ ಮಹಾನ್ ಕೊಡುಗೆಯನ್ನು ನೀಡಿದ್ದಾರೆ. ಅವರು ಧರ್ಮಸಭೆ ಕಂಡ ಮಹಾ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.

ಫಾದರ್ ಗುಸ್ಟಾವೊ ಗುತಿಯೆರೆಝ್ ಅವರ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿಡಿಯೋ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದ್ದಾರೆ. "ಇಂದು ನಾನು ಫಾದರ್ ಗುಸ್ಟಾವೊ ಗುತಿಯೆರೆಝ್ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಆತ ನಮ್ಮ ನಡುವೆ ಜೀವಿಸಿದ ಧರ್ಮಸಭೆಯ ಮಹಾ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.

ವಿಮೋಚನಾ ದೈವಶಾಸ್ತ್ರ (Liberation Theology) ದ ಸ್ಥಾಪಕರಾಗಿದ್ದ ಅವರು ಡೊಮಿನಿಕನ್ ಸಭೆಯ ಗುರುವಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಪೆರು ದೇಶದ ಲಿಮಾ ನಗರದಲ್ಲಿ ಮಾಡಲಾಯಿತು.

ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಗುಸ್ಟಾವೋ ಅವರಿಗೆ ಮೌನವಾಗಿರಬೇಕಾದ ಸಂದರ್ಭದಲ್ಲಿ ಮೌನವಾಗಿರುವುದು ತಿಳಿದಿತ್ತು. ಯಾತನೆಯನ್ನು ಅನುಭವಿಸುವ ಸಮಯದಲ್ಲಿ ಯಾತನೆಯನ್ನು ಅನುಭವಿಸುವುದೂ ಸಹ ತಿಳಿದಿತ್ತು" ಎಂದು ಹೇಳಿದ್ದಾರೆ.

ಫಾದರ್ ಗುಸ್ಟಾವೊ ಗುತಿಯೆರೆಝ್ ಅವರು ವಿಮೋಚನಾ ದೈವಶಾಸ್ತ್ರ (Liberation Theology) ದ ಕುರಿತು ಬರೆಯುವಾಗ ಅವರು ವಿವಾದಕ್ಕೆ ಸಿಲುಕಿದ್ದರು. ಈ ಕುರಿತು ಅಂದಿನ ವ್ಯಾಟಿಕನ್ನಿನ ವಿಶ್ವಾಸ ಪ್ರಮಾಣ ಆಯೋಗದ ಉಸ್ತುವಾರಿಯಾಗಿದ್ದ ಕಾರ್ಡಿನಲ್ ಜೋಸೆಫ್ ರಾಟ್ಝಿಂಗರ್ (ಭವಿಷ್ಯದ ಪೋಪ್ ಹದಿನಾರನೇ ಬೆನೆಡಿಕ್ಟ್) ಅವರು ಈ ಕುರಿತು ತನಿಖೆಯನ್ನು ನಡೆಸಿ, ಫಾದರ್ ಗುಸ್ಟಾವೊ ಗುತಿಯೆರೆಝ್ ಅವರ ಬರಹಗಳಲ್ಲಿ ಯಾವುದೇ ದೈವಶಾಸ್ತ್ರೀಯ ತಪ್ಪುಗಳಿಲ್ಲ ಎಂದು ವರದಿ ನೀಡಿತ್ತು. ಅದಾದ ನಂತರ ಅವರು ವ್ಯಾಟಿಕನ್ ರೇಡಿಯೋಗೆ ವಿಮೋಚನಾ ದೈವಶಾಸ್ತ್ರ (Liberation Theology) ದ ಕುರಿತು ಮಾತನಾಡಿದ್ದರು.

25 October 2024, 13:51