ಹುಡುಕಿ

ಇಂದು ಉಕ್ರೇನ್ ಅಧ್ಯಕ್ಷರನ್ನು ಬರಮಾಡಿಕೊಳ್ಳಲಿರುವ ಪೋಪ್ ಫ್ರಾನ್ಸಿಸ್

ಜೂನ್ ತಿಂಗಳಲ್ಲಿ ಇಟಲಿಯ ಪುಲಿಯಾ ನಗರದಲ್ಲಿ ನಡೆದ ಜಿ 7 ಶೃಂಗಸಭೆಯ ನಂತರ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ನಗರದಲ್ಲಿ ಇಂದು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಜೂನ್ ತಿಂಗಳಲ್ಲಿ ಇಟಲಿಯ ಪುಲಿಯಾ ನಗರದಲ್ಲಿ ನಡೆದ ಜಿ 7 ಶೃಂಗಸಭೆಯ ನಂತರ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ನಗರದಲ್ಲಿ ಇಂದು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ವ್ಯಾಟಿಕನ್ ಮಾಧ್ಯಮ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಪೋಪ್ ಫ್ರಾನ್ಸಿಸ್ ಅವರು ಅಕ್ಟೋಬರ್ 11 ರಂದು ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ವ್ಯಾಟಿಕನ್ ನಗರಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಅಕ್ಟೋಬರ್ 9 ರಂದು ಸೌಥ್-ಈಸ್ಟ್ ಯೂರೋಪ್ ಸಭೆಯಲ್ಲಿ ಆದ "ಡುಬ್ರೋವ್ನಿಕ್ ಘೋಷಣೆ"ಯ ನಂತರ ಈ ಭೇಟಿಯು ನಡೆಯುತ್ತಿದ್ದು, ಇದು ಉಕ್ರೇನ್ ದೇಶದಲ್ಲಿ ಯುದ್ಧ ಆರಂಭವಾದಾಗಿನಿಂತ ನಡೆಯುತ್ತಿರುವ ಶಾಂತಿ ಪ್ರೇರಿತ ಸಭೆಗಳಲ್ಲಿ ನಾಲ್ಕನೇ ಸಭೆಯಾಗಿದೆ ಎಂದು ಹೇಳಲಾಗಿದೆ.

ವಿಶ್ವಗುರು ಫ್ರಾನ್ಸಿಸ್ ಅವರು ಯುದ್ಧ ಆರಂಭವಾಗಿನಿಂದಲೂ ಸಹ ಅದನ್ನು ನಿಲ್ಲಿಸುವಂತೆ ಹಾಗೂ ರಷ್ಯಾ ಕದನ ವಿರಾಮವನ್ನು ಘೋಷಿಸುವಂತೆ ಪದೇ ಪದೇ ಮನವಿಗಳನ್ನು ಮಾಡಿಕೊಳ್ಳುತ್ತಿದ್ದರು. ಇದಲ್ಲದೆ, ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರೂ ಸೇರಿದಂತೆ ಪವಿತ್ರ ಪೀಠದ ವಿವಿಧ ಅಧಿಕಾರಿಗಳನ್ನು ಉಕ್ರೇನ್ ದೇಶಕ್ಕೆ ಕಳುಹಿಸಿ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸುವಂತೆ ಹಾಗೂ ಶಾಂತಿ ಸಭೆಗಳನ್ನು ನಡೆಸುವಂತೆ ಕೋರಿದ್ದರು.

11 October 2024, 07:29