ಹುಡುಕಿ

2023.10.12 Nossa Senhora Aparecida - Brasil

ಪೋಪ್ ಫ್ರಾನ್ಸಿಸ್: ಅಪಾರಿಸೀಡ ಸಂದೇಶ ಸಾಮರಸ್ಯದ ಸಂದೇಶವಾಗಿದೆ

ಬ್ರೆಜಿಲ್ ದೇಶದಲ್ಲಿ ಅಪಾರಿಸೀಡಾ ಮಾತೆಯ ಹಬ್ಬವನ್ನು ಕೊಂಡಾಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವಗುರು ಫ್ರಾನ್ಸಿಸ್ ಅವರು ವಿಡಿಯೋ ಸಂದೇಶವನ್ನು ಕಳುಹಿಸಿದ್ದು, ಅಪಾರಿಸೀಡಾ ಎಂಬ ಪ್ರದೇಶದಲ್ಲಿ ದರ್ಶನವಿತ್ತ ಮಾತೆ ಮರಿಯಮ್ಮನವರ ಸಂದೇಶ ಸಾಮರಸ್ಯದ ಸಂದೇಶವಾಗಿದೆ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಅಕ್ಟೋಬರ್ 12 ರಂದು ಬ್ರೆಜಿಲ್ ದೇಶವು ತನ್ನ ಪಾಲಕಿ ಅಪಾರ್ಸೀಡಾ ಮಾತೆಯ ಮಹೋತ್ಸವವನ್ನು ಕೊಂಡಾಡುತ್ತದೆ. ಬ್ರೆಜಿಲ್ ದೇಶದಲ್ಲಿ ಅಪಾರಿಸೀಡಾ ಮಾತೆಯ ಹಬ್ಬವನ್ನು ಕೊಂಡಾಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವಗುರು ಫ್ರಾನ್ಸಿಸ್ ಅವರು ವಿಡಿಯೋ ಸಂದೇಶವನ್ನು ಕಳುಹಿಸಿದ್ದು, ಅಪಾರಿಸೀಡಾ ಎಂಬ ಪ್ರದೇಶದಲ್ಲಿ ದರ್ಶನವಿತ್ತ ಮಾತೆ ಮರಿಯಮ್ಮನವರ ಸಂದೇಶ ಸಾಮರಸ್ಯದ ಸಂದೇಶವಾಗಿದೆ ಎಂದು ಹೇಳಿದ್ದಾರೆ. 

"ಅಪಾರ್ಸೀಡಾ ಮಾತೆ ಎಂಬ ನಾಮದಡಿಯಲ್ಲಿ ಮಾತೆ ಮರಿಯಮ್ಮನವರ ಹಬ್ಬವನ್ನು ಕೊಂಡಾಡುತ್ತಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಹಾಗೂ ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗಿದ್ದೇನೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಬ್ರೆಜಿಲ್ ದೇಶದ ಪೋರ್ತೋ ಅಲೆಗ್ರೆ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ  ಹಾಗೂ ನೂತನ ನೇಮಿತ ಕಾರ್ಡಿನಲ್ ಆಗಿರುವ ಜೇಮಿ ಸ್ಪೆಂಗ್ಲರ್ ಅವರು ಚಿತ್ರೀಕರಿಸಿರುವ ವಿಡಿಯೋ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು "ಎಂದಿಗೂ ಮುನ್ನಡೆಯಿರಿ. ಅಪಾರಿಸಿಡಾ ಮಾತೆಯ ಸಂದೇಶ ಸಾಮರಸ್ಯದ ಸಂದೇಶವಾಗಿದ್ದು, ಮಾತೆ ಮರಿಯಮ್ಮನವರು ಎಂದಿಗೂ ನಮ್ಮ ಜೊತೆ ಇದ್ದು, ನಮಗಾಗಿ ಪ್ರಾರ್ಥಿಸುತ್ತಾರೆ." ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಅಪಾರಿಸೀಡಾ ಮಾತೆಯ ಈ ಪುಣ್ಯಕ್ಷೇತ್ರಕ್ಕೆ ಹಲವಾರು ಬಾರಿ ಆಗಮಿಸಿದ್ದು, 2013 ರಲ್ಲಿ ಅವರು ವಿಶ್ವಗುರುಗಳಾದಾಗ ವಿಶ್ವ ಯುವ ದಿನದ ನಿಮಿತ್ತ ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಅವರು " ನನ್ನ ಪ್ರೇಷಿತಾಧಿಕಾರವನ್ನು ಅಪಾರಿಸೀಡಾ ಮಾತೆಯ ಮಧ್ಯಸ್ಥಿಕೆಗೆ ಒಪ್ಪಿಸುವ ಸುಅವಕಾಶ ನನ್ನದಾಗಿದೆ" ಎಂದು ಹೇಳಿದ್ದರು.        

12 October 2024, 14:43