ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪವಿತ್ರಾತ್ಮರು ಧರ್ಮಸಭೆಯನ್ನು ವಿಸ್ತರಿಸಿ, ಒಗ್ಗೂಡಿಸುತ್ತಾರೆ

ವಿಶ್ವಗುರು ಫ್ರಾನ್ಸಿಸ್ ಅವರು ಬುಧವಾರ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪವಿತ್ರಾತ್ಮರು ಧರ್ಮಸಭೆಯನ್ನು ವಿಸ್ತರಿಸುತ್ತಾರೆ ಹಾಗೂ ಒಗ್ಗೂಡಿಸುತ್ತಾರೆ ಎಂದು ಹೇಳಿದ್ದಾರೆ.

ವರದಿ: ಫ್ರಾನ್ಸಿಸ್ಕ ಮರ್ಲೊ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ಬುಧವಾರ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪವಿತ್ರಾತ್ಮರು ಧರ್ಮಸಭೆಯನ್ನು ವಿಸ್ತರಿಸುತ್ತಾರೆ ಹಾಗೂ ಒಗ್ಗೂಡಿಸುತ್ತಾರೆ ಎಂದು ಹೇಳಿದ್ದಾರೆ.

ಪ್ರೇಷಿತರ ಕಾರ್ಯಕಲಾಪಗಳ ಪುಸ್ತಕದಿಂದ ತಮ್ಮ ದೈವ ಭಾಗ್ಯದ ಚಿಂತನೆಯನ್ನು ಆರಂಭಿಸಿದ ವಿಶ್ವಗುರು ಫ್ರಾನ್ಸಿಸ್ ಪವಿತ್ರಾತ್ಮರ ಎರಡು ವಿಭಿನ್ನ ಕಾರ್ಯಗಳ ಕುರಿತು ವಿವರಿಸಿದ್ದರು. ಈ ಪೈಕಿ ಪವಿತ್ರಾತ್ಮರ ಮೊದಲ ಕಾರ್ಯ ಧರ್ಮಸಭೆಯನ್ನು ವಿಸ್ತರಿಸುವುದಾಗಿದೆ ಹಾಗೂ ಅವರ ಎರಡನೇ ಕಾರ್ಯ ವಿಸ್ತರಿಸಲ್ಪಟ್ಟ ಧರ್ಮ ಸಭೆಯನ್ನು ಆಂತರಿಕವಾಗಿ ಹಾಗೂ ಬಹಿರಂಗವಾಗಿ ಒಗ್ಗೂಡಿಸುವುದಾಗಿದೆ.

ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಹೇಗೆ ಪವಿತ್ರಾತ್ಮರು ಪ್ರಭುವಿನ ಶಿಷ್ಯರ ಮೇಲೆ ಇಳಿದು ಬಂದರು ಎಂಬ ಕುರಿತು ಬೆಳಕನ್ನು ಚೆಲ್ಲಿದರು. ಈ ಕುರಿತು ಮಾತನಾಡಿದ ಅವರು "ಶಿಷ್ಯರ ಮೇಲೆ ಪವಿತ್ರಾತ್ಮರು ಇಳಿದು ಬಂದಾಗ ಅವರು ಪವಿತ್ರಾತ್ಮರಿಂದ ಪ್ರೇರಿತರಾಗಿ ಹೊಸ ಸೃಷ್ಟಿಗಳಾದರು. ವಿವಿಧ ಭಾಷೆಗಳಲ್ಲಿ ತಮಗೆ ಅರಿವಿಲ್ಲದಂತೆ ಪ್ರಭುವಿನ ಶುಭ ಸಂದೇಶವನ್ನು ಸಾರಿದರು. ಅವರಿಗೆ ಯಾವುದೇ ರೀತಿಯ ಭಯ ಭೀತಿ ಎಂಬುದು ಇರಲಿಲ್ಲ. ಧೈರ್ಯ ಹಾಗೂ ಒಮ್ಮತದ ಮನೋಭಾವದಿಂದ ಅವರು ಪ್ರಭುವಿನ ಶುಭ ಸಂದೇಶವನ್ನು ಲೋಕದ ಕಟ್ಟ ಕಡೆಗೂ ಸಾರಲು ಅಭಿಷೇಕ್ತರಾದರು." ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಸಂತ ಅಗಸ್ಟೀನ್ ಅವರ ಮಾತುಗಳನ್ನು ನೆನಪಿಸಿಕೊಂಡರು. "ಪವಿತ್ರಾತ್ಮರು ಧರ್ಮಸಭೆಯ ಆತ್ಮವಾಗಿದ್ದಾರೆ." ಎಂದು ಅವರು ಹೇಳಿದರು. ತಮ್ಮ ಚಿಂತನೆಯ ಕೊನೆಯಲ್ಲಿ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ಪ್ರಾರ್ಥಿಸುವಂತೆ ಎಲ್ಲರಿಗೂ ಕರೆ ನೀಡಿದರು.

09 October 2024, 18:39