ಸಾರ್ವಜನಿಕ ಭೇಟಿಯಲ್ಲಿ ವಿಶ್ವಗುರು ಫ್ರಾನ್ಸಿಸ್: ಎಲ್ಲವೂ ಇಲ್ಲಿ ಕೊನೆಗೊಳ್ಳುತ್ತದೆ ಎಂಬ ಆಲೋಚನೆಯಿಂದ ವಿಶ್ವಾಸವು ನಮ್ಮನ್ನು ಬಿಡುಗಡೆಗೊಳಿಸುತ್ತದೆ
ವರದಿ: ದೇಬೋರ ಕ್ಯಾಸ್ಟಲಿನೊ ಲುಬೋವ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಇಂದು ಸಾರ್ವಜನಿಕರನ್ನು ಭೇಟಿ ಮಾಡಿ, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಅವರು ಮಾತನಾಡುವಾಗ ಪವಿತ್ರಾತ್ಮರ ಕುರಿತು ಮಾತನಾಡಿದ್ದು, ಎಲ್ಲವೂ ಇಲ್ಲಿ ಕೊನೆಗೊಳ್ಳುತ್ತದೆ ಎಂಬ ಆಲೋಚನೆಯಿಂದ ವಿಶ್ವಾಸವು ನಮ್ಮನ್ನು ಬಿಡುಗಡೆಗೊಳಿಸುತ್ತದೆ ಎಂದು ಹೇಳಿದ್ದಾರೆ.
"ಈ ಜಗತ್ತಿನಲ್ಲಿ ನ್ಯಾಯ ಎಂಬುದಿಲ್ಲ. ಯಾತನೆ ಪಡುವವರಿಗೆ ಎಂದಿಗೂ ಸಹ ಸುಖವಿಲ್ಲ. ಎಲ್ಲವೂ ಇಲ್ಲಿ ಕೊನೆಗೊಳ್ಳುತ್ತದೆ ಎಂಬ ಮನೋಭಾವದಿಂದ ನಮ್ಮ ವಿಶ್ವಾಸವು ನಮ್ಮನ್ನು ಬಿಡುಗಡೆಗೊಳಿಸುತ್ತದೆ" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಬುಧವಾರ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಹೇಳಿದರು. ಅವರು ಸಾರ್ವಜನಿಕ ಭೇಟಿಗಳಲ್ಲಿ ಪವಿತ್ರಾತ್ಮರ ಕುರಿತು ತಮ್ಮ ಧರ್ಮೋಪದೇಶ ಸರಣಿಯನ್ನು ಮುಂದುವರಿಸಿದರು.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಧರ್ಮಸಭೆಯಲ್ಲಿ ಪವಿತ್ರಾತ್ಮರ ಪಾತ್ರದ ಕುರಿತು ಮಾತನಾಡಿದರು. ಕ್ರೈಸ್ತರ ನಡುವೆ ಸಂಧಾನ ಹಾಗೂ ಸಂವಾದ ಏರ್ಪಡಿಸುವಲ್ಲಿ ಪವಿತ್ರತ್ಮರು ನೆರವಾಗುತ್ತಾರೆ. ಅವರು ನಮ್ಮ ಬದುಕಿನ ಜೀವಾಳವಾಗಿದ್ದಾರೆ ಎಂದು ಹೇಳಿದ್ದಾರೆ. ಪವಿತ್ರಾತ್ಮರೆ ಪ್ರಭುವಾಗಿದ್ದಾರೆ ಹಾಗೂ ನಿಜ ದೇವರಾಗಿದ್ದಾರೆ ಎಂದು ಅವರು ಪುನರುಚ್ಚರಿಸಿದರು.
ಕ್ರೈಸ್ತರಾದ ನಾವೆಲ್ಲರೂ ಸಮಾಧಾನದಿಂದ ಇರಬೇಕು ಏಕೆಂದರೆ ಪವಿತ್ರಾತ್ಮರು ನಮಗೆ ನಿತ್ಯ ಜೀವನವನ್ನು ನೀಡಿದ್ದಾರೆ. ಕ್ರೈಸ್ತರು ಮಾತ್ರವಲ್ಲದೆ ನಿತ್ಯ ಜೀವವನ್ನು ದೇವರಲ್ಲಿ ವಿಶ್ವಾಸ ಬಿಡುವ ಎಲ್ಲರಿಗೂ ನೀಡಿದ್ದಾರೆ. ಇದುವೇ ಅವರು ನಮಗೆ ನೀಡಿರುವ ಪರಮೋನ್ನತ ಸಮಾಧಾನವಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ನುಡಿದರು. ಪವಿತ್ರಾತ್ಮರು ನೀಡುವ ವಿಶ್ವಾಸವು ನಮಗೆ ವಿಶ್ವಾಸ ಹಾಗೂ ಭರವಸೆಯನ್ನು ನೀಡುತ್ತದೆ. ಈ ಮೂಲಕ ಕ್ರಿಸ್ತಿಯ ಬದುಕಿಗೆ ಆಧಾರವಾಗುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.