ಹುಡುಕಿ

ಸಂತರನ್ನು ಪದವಿಗೇರಿಸುವ ಬಲಿಪೂಜೆಯಲ್ಲಿ ವಿಶ್ವಗುರು ಫ್ರಾನ್ಸಿಸ್: ಸೇವೆಯೇ ಕ್ರಿಸ್ತೀಯ ಬದುಕಿನ ರೀತಿಯಾಗಿದೆ

11 ಜನ ರಕ್ತಸಾಕ್ಷಿಗಳು ಸೇರಿದಂತೆ 14 ಫ್ರಾನ್ಸಿಸ್ಕನ್ ಸಭೆಯ ಗುರುಗಳನ್ನು ಸಂತರ ಪದವಿಗೇರಿಸುವ ಬಲಿಪೂಜೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮಾತನಾಡಿದ್ದು, ಸೇವೆಯೇ ಕ್ರಿಸ್ತೀಯ ಬದುಕಿನ ರೀತಿಯಾಗಿದೆ ಎಂದು ಹೇಳಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ,ಅಜಯ್ ಕುಮಾರ್

11 ಜನ ರಕ್ತಸಾಕ್ಷಿಗಳು ಸೇರಿದಂತೆ 14 ಫ್ರಾನ್ಸಿಸ್ಕನ್ ಸಭೆಯ ಗುರುಗಳನ್ನು ಸಂತರ ಪದವಿಗೇರಿಸುವ ಬಲಿಪೂಜೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮಾತನಾಡಿದ್ದು, ಸೇವೆಯೇ ಕ್ರಿಸ್ತೀಯ ಬದುಕಿನ ರೀತಿಯಾಗಿದೆ ಎಂದು ಹೇಳಿದ್ದಾರೆ.

ಸಿರಿಯಾ ದೇಶದಲ್ಲಿ ಸುವಾರ್ತಾ ಪ್ರಸಾರ ಕಾರ್ಯದಲ್ಲಿ ಮಗ್ನರಾಗಿರುವಾಗ, ಇವರನ್ನು ಶತ್ರುಗಳು ಸೆರೆ ಹಿಡಿದರು. ಆ ಸಂದರ್ಭದಲ್ಲಿ ಕ್ರೈಸ್ತ ಧರ್ಮವನ್ನು ತ್ಯಜಿಸಬೇಕು. ತ್ಯಜಿಸಿದರೆ ನಿಮ್ಮನ್ನು ಕೊಲ್ಲುವುದಿಲ್ಲ ಎಂದು ಹೇಳಿದಾಗ ಅದಕ್ಕೆ ಮಣಿಯದೆ ಇವರೆಲ್ಲರೂ ಕ್ರೈಸ್ತ ವಿಶ್ವಾಸಕ್ಕೆ ತಮ್ಮ ಪ್ರಾಣವನ್ನು ಅರ್ಪಿಸಿದರು.

ಈ ನೂತನ ಸಂತರುಗಳು ಯೇಸುವಿನ ರೀತಿಯಾದ ಸೇವೆಯನ್ನು ಅನುಕರಿಸಿದರು ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು. ಪ್ರಭುವಿನ ಶುಭ ಸಂದೇಶವನ್ನು ಸಾರುವಾಗ, ಅವರು ಯಾವುದೇ ರೀತಿಯ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಬದಲಿಗೆ ತಮ್ಮಲ್ಲೇ ಸಹೋದರ ಸಹೋದರಿಯರಾಗಿ, ಇತರರ ಸೇವೆಗೆ ಮುಂದಾಗುತ್ತಿದ್ದರು. ದೇವರು ಅವರನ್ನು ಮಹೋನ್ನತವಾಗಿಸಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

ಇಂದಿನ ಶುಭ ಸಂದೇಶದ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಇಂದಿನ ಶುಭ ಸಂದೇಶದಲ್ಲಿ ಯೇಸುವಿನ ಶಿಷ್ಯರು ಅಧಿಕಾರಕ್ಕಾಗಿ ಆಸೆಪಡುತ್ತಾರೆ. ಅವರಿಗೆ ಯೇಸು ಕೇಳಿದ ಪ್ರಶ್ನೆ ಎಂದರೆ ನಾನು ಕುಡಿಯುವ ಪಾತ್ರೆಯಿಂದ ನೀವು ಕುಡಿಯುತ್ತೀರೋ? ಎಂಬುದಾಗಿದೆ. ಯೇಸುವನ್ನು ಅನುಕರಿಸುವುದು ಎಂದರೆ ಅವರ ಸೇವೆಯನ್ನು ಅನುಕರಿಸುವುದು ಎಂದರ್ಥ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

20 October 2024, 17:44