21 ನೂತನ ಕಾರ್ಡಿನಲ್'ಗಳನ್ನು ಘೋಷಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವ ಧರ್ಮಸಭೆಗಾಗಿ 21 ನೂತನ ಕಾರ್ಡಿನಲ್'ಗಳನ್ನು ಘೋಷಿಸಿದ್ದಾರೆ. ಕಾರ್ಡಿನಲ್ಲುಗಳಾಗಿ ಆಯ್ಕೆಯಾಗಿರುವವರ ಅಭಿಷೇಕವು ಡಿಸೆಂಬರ್ 8 ರಂದು ಅಮಲೋಧ್ಭವಿ ಮಾತೆಯ ಹಬ್ಬದಂದು ರೋಮ್ ನಗರದಲ್ಲಿ ನಡೆಯಲಿದೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವ ಧರ್ಮಸಭೆಗಾಗಿ 21 ನೂತನ ಕಾರ್ಡಿನಲ್'ಗಳನ್ನು ಘೋಷಿಸಿದ್ದಾರೆ. ಕಾರ್ಡಿನಲ್ಲುಗಳಾಗಿ ಆಯ್ಕೆಯಾಗಿರುವವರ ಅಭಿಷೇಕವು ಡಿಸೆಂಬರ್ 8 ರಂದು ಅಮಲೋಧ್ಭವಿ ಮಾತೆಯ ಹಬ್ಬದಂದು ರೋಮ್ ನಗರದಲ್ಲಿ ನಡೆಯಲಿದೆ.

ಪೋಪ್ ಫ್ರಾನ್ಸಿಸ್ ಅವರು ಘೋಷಿಸಿರುವ ನೂತನ ಕಾರ್ಡಿನಲ್'ಗಳು ವಿಶ್ವದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ಜ್ಯೂಬಿಲಿ ವರ್ಷಕ್ಕೂ ಮುಂಚಿತವಾಗಿ, ಸಿನೋಡ್ ಮಹಾಸಭೆಗಳು ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ವಿಶ್ವ ಧರ್ಮಸಭೆಗೆ 21 ನೂತನ ಕಾರ್ಡಿನಲ್'ಗಳು ದೊರಕಲಿದ್ದಾರೆ. ಈವರೆಗಿನ ಮಾಹಿತಿಯ ಪ್ರಕಾರ, ಈವರೆಗೂ ವಿಶ್ವದಲ್ಲಿ ಸುಮಾರು 256 ಕಾರ್ಡಿನಲ್ಲುಗಳಿದ್ದು, ಇವರ ಪೈಕಿ 141 ಕಾರ್ಡಿನಲ್'ಗಳು ವಿಶ್ವಗುರುಗಳ ಚುನಾವಣೆಯಲ್ಲಿ ಮತ ಹಾಕುವ ಅರ್ಹತೆಯನ್ನು ಹೊಂದಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಘೋಷಿಸಿದ ನೂತನ ಕಾರ್ಡಿನಲ್'ಗಳ ವಿವರ:

1. ಅತಿ ಪೂಜ್ಯ ಮೊನ್ಸಿಜ್ಞೊರ್ ಎಂಜೆಲೋ ಅಚೇರ್ಬಿ, ಪ್ರೇಷಿತ ರಾಯಭಾರಿ
2. ಅತಿ ಪೂಜ್ಯ ಮೊನ್ಸಿಜ್ಞೊರ್ ಕಾರ್ಲೋಸ್ ಗುಸ್ತಾವೊ ಕಸ್ಟಿಲ್ಲೋ ಮಟ್ಟಸೊಗ್ಲಿಯೊ, ಮಹಾಧರ್ಮಾಧ್ಯಕ್ಷ, ಲಿಮಾ (ಪೆರು)
3. ಅತಿ ಪೂಜ್ಯ ಮೊನ್ಸಿಜ್ಞೊರ್ ವಿಸೆಂತೆ ಬೊಕಾಲಿಕ್ ಇಗ್ಲಿಕ್, ಸಿ. ಎಂ., ಮಹಾಧರ್ಮಾಧ್ಯಕ್ಷ, ಸಂತಿಯಾಗೋ, ದೆಲ್ ಎಸ್ತೆರೋ, ಅರ್ಜೆಂಟೀನಾ
4. ಅತಿ ಪೂಜ್ಯ ಮೊನ್ಸಿಜ್ಞೊರ್ ಲೂಯಿಸ್ ಜೆರಾರ್ಡೊ ಕಬ್ರೇರಾ ಹೆರೇರಾ, ಓ. ಎಫ್. ಎಂ., ಮಹಾಧರ್ಮಾಧ್ಯಕ್ಷ, ಗುಯಾಕ್ವಿಲ್, ಈಕ್ವೆದೊರ್
5. ಅತಿ ಪೂಜ್ಯ ಮೊನ್ಸಿಜ್ಞೊರ್ ಫರ್ನಾಂಡೋ ನತಾಲೊಯೋ ಚೊಮಾಲಿ ಗಾರಿಬ್, ಮಹಾಧರ್ಮಾಧ್ಯಕ್ಷ, ಸಂತಿಯಾಗೋ ದೆ ಚಿಲಿ, ಚಿಲಿ.
6. ಅತಿ ಪೂಜ್ಯ ಮೊನ್ಸಿಜ್ಞೊರ್ ತಾರ್ಸಿಸಿಯೋ ಇಸಾವೊ ಕಿಕುಚಿ, ಎಸ್. ವಿ. ಡಿ., ಮಹಾಧರ್ಮಾಧ್ಯಕ್ಷ, ಟೋಕಿಯೋ, ಜಪಾನ್
7. ಅತಿ ಪೂಜ್ಯ ಮೊನ್ಸಿಜ್ಞೊರ್ ಪ್ಯಾಬ್ಲೋ ವರ್ಜಿಲಿಯೋ ಸಿಯಾಂಗ್ಕೊ ಡೇವಿಡ್, ಧರ್ಮಾಧ್ಯಕ್ಷ, ಕಲೂಕಾನ್, ಫಿಲಿಪ್ಪೀನ್ಸ್
8. ಅತಿ ಪೂಜ್ಯ ಮೊನ್ಸಿಜ್ಞೊರ್ ಲಡೀಸ್ಲಾವ್ ನೆಬೆತ್, ಎಸ್. ವಿ. ಡಿ., ಮಹಾಧರ್ಮಾಧ್ಯಕ್ಷ, ಬಿಯೊಗ್ರಡ್, ಸರ್ಬಿಯಾ.
9. ಅತಿ ಪೂಜ್ಯ ಮೊನ್ಸಿಜ್ಞೊರ್ ಜೇಮಿ ಸ್ಪೆಂಗ್ಲರ್, ಓ. ಎಫ್. ಎಂ., ಮಹಾಧರ್ಮಾಧ್ಯಕ್ಷ, ಪೋರ್ಟೊ ಅಲೆಗ್ರೆ, ಬ್ರಸೀಲ್.
10. ಅತಿ ಪೂಜ್ಯ ಮೊನ್ಸಿಜ್ಞೊರ್ ಇಗ್ನೇಸ್ ಬೆಸ್ಸಿ ಡೊಗ್ಬೊ, ಮಹಾಧರ್ಮಾಧ್ಯಕ್ಷ, ಅಬಿಡ್ಜಾನ್, ಈವರಿಕೋಸ್ಟ್
11. ಅತಿ ಪೂಜ್ಯ ಮೊನ್ಸಿಜ್ಞೊರ್ ಜಿಯಾನ್-ಪೌಲ್ ವೆಸ್ಕೋ, ಓ. ಪಿ., ಮಹಾಧರ್ಮಾಧ್ಯಕ್ಷ, ಅಲ್ಜೆರ್, ಅಲ್ಜೀರಿಯಾ.
12. ಅತಿ ಪೂಜ್ಯ ಮೊನ್ಸಿಜ್ಞೊರ್ ಪಸ್ಕಾಲಿಸ್ ಬ್ರೂನೋ ಸ್ಯೂಕುರ್, ಓ. ಎಫ್. ಎಂ., ಧರ್ಮಾಧ್ಯಕ್ಷ, ಬೊಗೋರ್, ಇಂಡೋನೇಶಿಯಾ
13. ಅತಿ ಪೂಜ್ಯ ಮೊನ್ಸಿಜ್ಞೊರ್ ಡೊಮಿನಿಕ್ ಜೋಸೆಫ್ ಮತಿಯೂ, ಓ.ಎಫ್.ಎಂ. ಕನ್ವೆನ್ಷನಲ್., ಮಹಾಧರ್ಮಾಧ್ಯಕ್ಷ, ತೆಹರಾನ್, ಇರಾನ್
14. ಅತಿ ಪೂಜ್ಯ ಮೊನ್ಸಿಜ್ಞೊರ್ ರೊಬೆರ್ತೊ ರೆಪೋಲೆ, ಮಹಾಧರ್ಮಾಧ್ಯಕ್ಷ, ಟ್ಯೂರಿನ್, ಇಟಲಿ
15. ಅತಿ ಪೂಜ್ಯ ಮೊನ್ಸಿಜ್ಞೊರ್ ಬಾಲ್ದೆಸ್ಸೆರಿ ರೈನಾ, ಸಹಾಯಕ ಧರ್ಮಾಧ್ಯಕ್ಷ ಹಾಗೂ ಶ್ರೇಷ್ಟಗುರು, ರೋಮ್ ಧರ್ಮಕ್ಷೇತ್ರ
16. ಅತಿ ಪೂಜ್ಯ ಮೊನ್ಸಿಜ್ಞೊರ್ ಫ್ರಾನ್ಸಿಸ್ ಲಿಯೋ, ಮಹಾಧರ್ಮಾಧ್ಯಕ್ಷ, ಟೊರೊಂಟೋ, ಕೆನಡಾ
17. ಅತಿ ಪೂಜ್ಯ ಮೊನ್ಸಿಜ್ಞೊರ್ ರೊಲಾಂಡಾಸ್ ಮಾಕ್ರಿಕಾಸ್, ಸೇಂಟ್ ಮೇರಿ ಮೇಜರ್ ಬಸಿಲಿಕಾದ ಮುಂದಿನ ಪ್ರಧಾನ ಗುರು
18. ಅತಿ ಪೂಜ್ಯ ಮೊನ್ಸಿಜ್ಞೊರ್ ಮೈಕೊಲಾ ಬೈಚೋಕ್, ಸಿ.ಎಸ್.ಆರ್., ಧರ್ಮಾಧ್ಯಕ್ಷ, ಎಪಾರ್ಕಿ ಆಫ್ ಸೇಂಟ್ಸ್ ಪೀಟರ್ ಆ್ಯಂಡ್ ಪೌಲ್ ಆಫ್ ಮೆಲ್ಬರ್ನ್ ಆಫ್ ಉಕ್ರೇನಿಯನ್ಸ್
19. ಅತಿ ಪೂಜ್ಯ ಮೊನ್ಸಿಜ್ಞೊರ್ ತಿಮೋಥಿ ಪೀಟರ್ ಜೋಸೆಫ್ ರಾಡ್ಕ್ಲಿಫ್, ಓ.ಪಿ., ದೈವಶಾಸ್ತ್ರಜ್ಞ
20. ಅತಿ ಪೂಜ್ಯ ಮೊನ್ಸಿಜ್ಞೊರ್ ಫೇಬಿಯೋ ಬಗ್ಗಿಯೋ, ಸಿ. ಎಸ್., ಸಮಗ್ರ ಮಾನವ ಅಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ
21. ಅತಿ ಪೂಜ್ಯ ಮೊನ್ಸಿಜ್ಞೊರ್ ಜಾರ್ಜ್ ಜೋಸೆಫ್ ಕೋವಕಾಡ್, ವ್ಯಾಟಿಕನ್ ಪೀಠದ ಪ್ರವಾಸ ಉಸ್ತುವಾರಿ

06 October 2024, 14:57