ಕಣ್ಣುಗಳನ್ನು ಮೇಲೆತ್ತಿ, ಕೈಜೋಡಿಸಿ, ಬರಿದಾದ ಪಾದಗಳೊಂದಿಗೆ ಸೇವಿ ಸಲ್ಲಿಸಿ: ನೂತನ ನೇಮಿತ ಕಾರ್ಡಿನಲ್ಲುಗಳಿಗೆ ವಿಶ್ವಗುರು ಫ್ರಾನ್ಸಿಸ್ ಕಿವಿಮಾತು

ಡಿಸೆಂಬರ್ 8ರಂದು ವಿಶ್ವಗುರು ಫ್ರಾನ್ಸಿಸ್ ಅವರು ಕಳೆದ ವಾರ ನೂತನವಾಗಿ ಘೋಷಿಸಿದ ಕಾರ್ಡಿನಲ್ಲುಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ. ಘನತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ನೀವು, ಶಿಲುಬೆಯ ಸಂತ ಜಾನರಂತೆ ನಿಮ್ಮ ಕಣ್ಣುಗಳನ್ನು ಮೇಲೆತ್ತಬೇಕು, ಕೈಗಳನ್ನು ಜೋಡಿಸಬೇಕು ಅಂದರೆ ಸದಾ ಪ್ರಾರ್ಥಿಸಬೇಕು ಹಾಗೂ ಬರಿದಾದ ಪಾದಗಳನ್ನು ಹೊಂದಬೇಕು ಅಂದರೆ ಸದಾ ಬಡವರ ಸೇವೆಯನ್ನು ಮಾಡಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಡಿಸೆಂಬರ್ 8ರಂದು ವಿಶ್ವಗುರು ಫ್ರಾನ್ಸಿಸ್ ಅವರು ಕಳೆದ ವಾರ ನೂತನವಾಗಿ ಘೋಷಿಸಿದ ಕಾರ್ಡಿನಲ್ಲುಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ. ಘನತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ನೀವು, ಶಿಲುಬೆಯ ಸಂತ ಜಾನರಂತೆ ನಿಮ್ಮ ಕಣ್ಣುಗಳನ್ನು ಮೇಲೆತ್ತಬೇಕು, ಕೈಗಳನ್ನು ಜೋಡಿಸಬೇಕು ಅಂದರೆ ಸದಾ ಪ್ರಾರ್ಥಿಸಬೇಕು ಹಾಗೂ ಬರಿದಾದ ಪಾದಗಳನ್ನು ಹೊಂದಬೇಕು ಅಂದರೆ ಸದಾ ಬಡವರ ಸೇವೆಯನ್ನು ಮಾಡಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

ವಿಶ್ವದ ವಿವಿಧ ಭಾಗಗಳಲ್ಲಿ ಧರ್ಮಸಭೆಗೆ ಸೇವೆ ಸಲ್ಲಿಸುತ್ತಿರುವ, ಧರ್ಮಧ್ಯಕ್ಷರು ಹಾಗೂ ಗುರುಗಳಾಗಿರುವ 21 ಮಂದಿ ಅಭ್ಯರ್ಥಿಗಳನ್ನು ವಿಶ್ವಗುರು ಫ್ರಾನ್ಸಿಸ್ ಅವರು ಕಳೆದ ವಾರ ಕಾರ್ಡಿನಲ್ ಪದವಿಗೆ ಏರಿಸಿದರು. ಇದೀಗ ಅವರಿಗೆ ವೈಯಕ್ತಿಕ ಪತ್ರವನ್ನು ಬರೆದಿರುವ ವಿಶ್ವಗುರುಗಳು, ಕಾರ್ಡಿನಲ್ಲುಗಳಾಗುವುದೆಂದರೆ ಧರ್ಮಸಭೆಯ ಐಕ್ಯತೆಯನ್ನು ಎತ್ತಿ ಹಿಡಿಯುವುದಾಗಿದೆ ಹಾಗೂ ಎಲ್ಲಾ ಧರ್ಮಸಭೆಗಳನ್ನು ರೋಮ್ ನಗರದ ಧರ್ಮಸಭೆಯೊಂದಿಗೆ ಐಕ್ಯಗೊಳಿಸುವುದಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅರ್ಜೆಂಟೀನಾದ ಕವಿ ಫ್ರೆಂಚೆಸ್ಕೋ ಲೂಯಿಸ್ ಬೆರ್ನಾರ್ಡೇಜ್ ಸಂತ ಶಿಲುಬೆಯ ಜಾನರ ಕುರಿತು ಬರೆದಿರುವ ಕವಿತೆಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ. "ಕಣ್ಣುಗಳನ್ನು ಮೇಲೆತ್ತಿ, ಕೈಜೋಡಿಸಿ, ಬರಿದಾದ ಪಾದಗಳೊಂದಿಗೆ" ಎಂಬುದು ಆ ಕವಿತೆಯ ಸಾಲುಗಳಾಗಿವೆ. "ನಾವು ಸಹ ಈ ಕವಿತೆಯ ಸಾಲುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ" ಎಂದು ವಿಶ್ವಗುರು ಫ್ರಾನ್ಸಿಸ್ ನೂತನ ಕಾರ್ಡಿನಲ್ಲುಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಅಂತಿಮವಾಗಿ ತಮ್ಮ ಪತ್ರದಲ್ಲಿ ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ ಹಾಗೂ ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.

12 October 2024, 14:14