ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಿಸುವಂತೆ ಮತ್ತೆ ಮನವಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ವಿವಿಧ ವಿಷಯಗಳ ಕುರಿತು ಭಕ್ತಾಧಿಗಳಿಗೆ ಹೇಳಿದ್ದು, ಈ ವೇಳೆ ಅವರು ಈ ಜಗತ್ತಿನಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳು ಕೊನೆಗೊಳ್ಳಲಿ ಎಂದು ಆಶಿಸಿದ್ದಾರೆ. ಯುದ್ಧಗಳು ನಿಲ್ಲಬೇಕೆಂದರೆ ಉಭಯ ಪಕ್ಷಗಳೂ ಸಹ ಕದನ ವಿರಾಮವನ್ನು ಘೋಷಿಸಬೇಕೆಂದು ಮನವಿ ಮಾಡಿಕೊಂಡಿದ್ಧಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೊವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ವಿವಿಧ ವಿಷಯಗಳ ಕುರಿತು ಭಕ್ತಾಧಿಗಳಿಗೆ ಹೇಳಿದ್ದು, ಈ ವೇಳೆ ಅವರು ಈ ಜಗತ್ತಿನಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳು ಕೊನೆಗೊಳ್ಳಲಿ ಎಂದು ಆಶಿಸಿದ್ದಾರೆ. ಯುದ್ಧಗಳು ನಿಲ್ಲಬೇಕೆಂದರೆ ಉಭಯ ಪಕ್ಷಗಳೂ ಸಹ ಕದನ ವಿರಾಮವನ್ನು ಘೋಷಿಸಬೇಕೆಂದು ಮನವಿ ಮಾಡಿಕೊಂಡಿದ್ಧಾರೆ.

"ನಾಳೆಗೆ ಇಸ್ರೇಲ್ ಜನರ ಮೇಲೆ ಉಗ್ರರು ದಾಳಿ ಮಾಡಿ ಒಂದು ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಇದರಿಂದ ನೋವಿಗೆ ಒಳಗಾದ ಎಲ್ಲಾ ಜನರ ಕುಟುಂಬಗಳ ಜೊತೆ ಆಧ್ಯಾತ್ಮಿಕವಾಗಿ ಐಕ್ಯತೆಯನ್ನು ಹೊಂದಿದ್ದೇನೆ." ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಮುಂದುವರೆದು ಮಾತನಾಡಿದ ಅವರು "ಈಗಲೂ ಸಹ ಗಾಝಾ ಪ್ರದೇಶದಲ್ಲಿ ಒತ್ತೆಯಾಳುಗಳಿದ್ದಾರೆ. ಪರಸ್ಪರ ಶಾಂತಿಯನ್ನು ಸ್ಥಾಪಿಸಬೇಕಾದರೆ ಒತ್ತೆಯಾಳುಗಳನ್ನು ಉಭಯ ಪಕ್ಷಗಳೂ ಸಹ ಬಿಡುಗಡೆ ಮಾಡಬೇಕು. ಯುದ್ಧಖೈದಿಗಳನ್ನೂ ಸಹ ಬಿಡುಗಡೆ ಮಾಡಬೇಕು" ಎಂದು ಪೋಪ್ ಫ್ರಾನ್ಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಗಾಝಾ ಸೇರಿದಂತೆ ಯುದ್ಧದ ದಾಳಿಗೆ ಒಳಗಾಗಿರುವ ಪ್ರದೇಶಗಳ ಕುರಿತು ಪೋಪ್ ಫ್ರಾನ್ಸಿಸ್ ಮಾತನಾಡಿದರು. ಈ ವೇಳೆ ಅವರು ಯಾವುದೇ ಯುದ್ಧದಲ್ಲಿ ಸಾಕಷ್ಟು ಹಿಂಸೆ ಹಾಗೂ ನೋವುಗಳನ್ನು ಅನುಭವಿಸುವುದು ಮುಗ್ಧ ಜನರಾಗಿದ್ದಾರೆ. ವಿಶೇಷವಾಗಿ ಮಕ್ಕಳು ಯುದ‌್ಧಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುದ್ಧದಿಂದ ಭಾಧಿತವಾಗಿರುವ ಪ್ರದೇಶಗಳಿಗೆ ಅಗತ್ಯವಾಗಿ ಮಾನವೀಯ ನೆರವು ದಕ್ಕಬೇಕು" ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ನಾಳೆ ರೋಮ್ ನಗರದಲ್ಲಿರುವ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಭೇಟಿ ನೀಡಿ ವಿಶ್ವಶಾಂತಿಗಾಗಿ ಜಪಸರ ಪ್ರಾರ್ಥನೆಯನ್ನು ಮಾಡಲಿದ್ದಾರೆ. ನಾಳೆ ಅವರು ಎಲ್ಲರೂ ಸಹ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದಾರೆ. 

06 October 2024, 17:15