ಯುದ್ಧಕ್ಕೆ ಬಲಿಪಶುಗಳಾದ ಮಕ್ಕಳನ್ನು ನೆನೆದ ಪೋಪ್ ಫ್ರಾನ್ಸಿಸ್; ಶಾಂತಿಗಾಗಿ ಪ್ರಾರ್ಥಿಸಲು ಕರೆ
ವರದಿ: ಥದ್ದೆಯೂಸ್ ಜೋನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ತಮ್ಮ ತ್ರಿಕಾಲ ಪ್ರಾರ್ಥನೆಯ ನಂತರ ಯುದ್ಧಕ್ಕೆ ಬಲಿಪಶುಗಳಾದ ಮಕ್ಕಳಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ವಿನಂತಿಸಿದರು. ಇದೇ ವೇಳೆ ದಿನೇ ದಿನೇ ಹೆಚ್ಚುತ್ತಿರುವ ಯುದ್ಧವು ಕೊನೆಗಾಣಲಿ ಎಂದು ಪ್ರಾರ್ಥಿಸುವಂತೆ ಕರೆ ನೀಡಿದರು.
ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯ ನಂತರ ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಯುದ್ಧದಲ್ಲಿ ಮಕ್ಕಳೇ ಸುಲಭ ಗುರಿಯಾಗಿದ್ದು, ಯುದ್ಧ ಎಂದಿಗೂ ಸೋಲಾಗಿದೆ. ಯುದ್ಧವನ್ನು ಎಂದಿಗೂ ಸಹ ನಾವು ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಮೆಕ್ಸಿಕೋ ನಗರದಲ್ಲಿ ಕೊಲೆಯಾದ ಗುರುಗಳನ್ನು ನೆನೆದು, ಅವರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.
ಪೋಪ್ ಫ್ರಾನ್ಸಿಸ್ ಅವರು ಜೆನೀವಾ ಸಮಾವೇಶದ ಕುರಿತು ಮಾತನಾಡಿ, ಅದರ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅದರ ಪ್ರಾಮುಖ್ಯತೆಯನ್ನು ತಿಳಿಸಿದರು.