ಹುಡುಕಿ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಮಕ್ಕಳು ದೇವರ ಅತ್ಯುನ್ನತ ವರದಾನ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಕ್ರೈಸ್ತ ದಂಪತಿಗಳಿಗೆ ಪ್ರೀತಿ, ಭರವಸೆ ಹಾಗೂ ನಂಬಿಕೆಯಲ್ಲಿ ಜೀವಿಸಬೇಕೆಂದು ಕರೆ ನೀಡಿದ್ದಾರೆ. ಇದಲ್ಲದೆ ನಿಮ್ಮ ಪವಿತ್ರ ಪ್ರೇಮದ ಫಲವಾಗಿರುವ ಮಕ್ಕಳು ದೇವರು ನಿಮಗೆ ನೀಡಿರುವ ಅತ್ಯುನ್ನತ ವರದಾನ ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಕ್ರೈಸ್ತ ದಂಪತಿಗಳಿಗೆ ಪ್ರೀತಿ, ಭರವಸೆ ಹಾಗೂ ನಂಬಿಕೆಯಲ್ಲಿ ಜೀವಿಸಬೇಕೆಂದು ಕರೆ ನೀಡಿದ್ದಾರೆ. ಇದಲ್ಲದೆ ನಿಮ್ಮ ಪವಿತ್ರ ಪ್ರೇಮದ ಫಲವಾಗಿರುವ ಮಕ್ಕಳು ದೇವರು ನಿಮಗೆ ನೀಡಿರುವ ಅತ್ಯುನ್ನತ ವರದಾನ ಎಂದು ಹೇಳಿದ್ದಾರೆ.   

"ದಂಪತಿಗಳು ತಮ್ಮ ವಿವಾಹ ಜೀವನದಲ್ಲಿ ಮಕ್ಕಳನ್ನು ಹೊಂದುವುದಕ್ಕೆ ಸಂಕೋಚ ಪಡಬಾರದು. ಏಕೆಂದರೆ ಮಕ್ಕಳು ಈ ಬದುಕಿನಲ್ಲಿ ನಮಗೆ ದೇವರು ನೀಡುವ ಅತ್ಯುನ್ನತ ವರದಾನಗಳಾಗಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯ ಚಿಂತನೆಯಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ಧೇಶಿಸಿ ಮಾತನಾಡಿದರು. ಪೋಪ್ ಫ್ರಾನ್ಸಿಸ್ ಅವರು ಇಂದಿನ ಮಾರ್ಕನ ಶುಭ ಸಂದೇಶದ ವಾಕ್ಯಗಳ ಕುರಿತು, ವಿಶೇಷವಾಗಿ ವಿವಾಹ ಪ್ರೀತಿಯ ಕುರಿತು ತಮ್ಮ ಚಿಂತನೆಯನ್ನು ನೀಡಿದರು.

ದಂಪತಿಗಳ ಅನ್ಯೋನ್ಯತೆಯ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಹೌದು, ನಾವೆಲ್ಲರೂ ಮನುಷ್ಯರು. ಮನುಷ್ಯ ಸಹಜ ಬಲಹೀನತೆಗಳು ನಮ್ಮಲ್ಲಿವೆ. ಆದರೆ, ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ಭಿನ್ನಾಭಿಪ್ರಾಯಗಳಿದ್ದರೆ, ಅದನ್ನು ಮಲಗುವುದಕ್ಕೆ ಮುಂಚಿತವಾಗಿ ಪರಿಹರಿಸಿಕೊಂಡು, ಶಾಂತಿಯುತವಾಗಿ ಜೀವಿಸಬೇಕು" ಎಂಬ ಕಿವಿಮಾತನ್ನು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ತಮ್ಮ ಚಿಂತನೆಯ ಕೊನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು "ನಮ್ಮ ಪ್ರೀತಿ ಹೇಗಿದೆ?", "ವೈವಾಹಿಕ ಜೀವನದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ?" ಎಂಬ ನಿಟ್ಟಿನಲ್ಲಿ ಚಿಂತನೆಯನ್ನು ನಡೆಸಲು ನೆರೆದಿದ್ದ ಭಕ್ತಾಧಿಗಳಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟರು.         

06 October 2024, 15:07