ವಿಶ್ವ ಆಹಾರ ದಿನ: ಆಹಾರ ಸರಪಳಿಯ ಕೊನೆಯಲ್ಲಿರುವವರಿಗೆ ಕಾಳಜಿಯನ್ನು ನೀಡುವಂತೆ ಒತ್ತಾಯಿಸಿದ ವಿಶ್ವಗುರು ಫ್ರಾನ್ಸಿಸ್

ವಿಶ್ವ ಆಹಾರ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಆರ್ಥಿಕ ಹಾಗೂ ರಾಜಕೀಯ ನಾಯಕರು ಆಹಾರ ಸರಪಳಿಯ ಕೊನೆಯಲ್ಲಿರುವವರಿಗೆ ಕಾಳಜಿಯನ್ನು ವ್ಯಕ್ತಪಡಿಸಬೇಕು ಹಾಗೂ ಅವರಿಗೂ ಸಹ ಆಹಾರ ದೊರಕುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಯನ್ನು ಬರೆದುಕೊಂಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಈ ಹಿನ್ನೆಲೆಯಲ್ಲಿ ಜನರು ವಿಶೇಷವಾಗಿ ಹಣವಂತರು ಹಾಗೂ ಸರ್ಕಾರಗಳು ಹೂಡಿಕೆ ಮಾಡಬೇಕು ಎಂದು ಹೇಳಿದರು.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಯುದ್ಧದ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಈ ಜಗತ್ತಿನಲ್ಲಿ ಮನುಷ್ಯರು ಆಹಾರವಿಲ್ಲದೆ ನರಳುತ್ತಿರುವುದಕ್ಕೆ ಅತಿಮುಖ್ಯ ಕಾರಣವೆಂದರೆ ಯುದ್ಧವಾಗಿದೆ. ಯುದ್ಧ ಎಂಬುದು ಮಾನವೀಯತೆಯ ಅತ್ಯಂತ ದೊಡ್ಡ ಶತ್ರುವಾದ ಸ್ವಾರ್ಥ ಎಂಬ ಅಂಶವನ್ನು ಮುನ್ನೆಲೆಗೆ ತರುತ್ತದೆ. ಹೀಗೆ ಸ್ವಾರ್ಥ ಎಂಬುದು ಮನುಷ್ಯರಲ್ಲಿ ಬಂದಾಗ ಎಲ್ಲಾ ರೀತಿಯ ಕೊರತೆಗಳು ಕಂಡುಬರುತ್ತವೆ. ಹಾಗಾಗಿ ಯುದ್ಧವನ್ನು ಮುಂದುವರಿಸಲು ಯಾವುದೇ ಕಾರಣಗಳು ಇರಬಾರದು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಇದೆ ವೇಳೆ ವಿಶ್ವಗುರು ಫ್ರಾನ್ಸಿಸ್ ಅವರು ಸಮಾಜದ ಹಂಚಿನಲ್ಲಿರುವ ಜನತೆಗಾಗಿ ನಾವು ಕಾಳಜಿ ಅಥವಾ ವ್ಯಕ್ತಪಡಿಸಬೇಕು. ದೀನರಲ್ಲಿ ಹಾಗೂ ದುರ್ಬಲರಲ್ಲಿ ಪ್ರಭು ಏಸುಕ್ರಿಸ್ತರನ್ನು ಕಾಣಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹ ಹಸಿವಿನಿಂದ ಮಲಗಬಾರದು. ಹಸಿವು ಎಂಬ ಸಮಸ್ಯೆ ವಿಶ್ವದಲ್ಲಿಯೇ ಇರಬಾರದು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು. ಈ ನಿಟ್ಟಿನಲ್ಲಿ ನಮ್ಮ ರಾಜಕೀಯ ನಾಯಕರುಗಳು ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಸಿವನ್ನು ನಿರ್ನಾಮ ಮಾಡುವ ಕ್ರಮಗಳನ್ನು ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

16 October 2024, 18:03