ಜಿ7 ಶೃಂಗಸಭೆಯಲ್ಲಿ ಒಳಗೊಳ್ಳುವಿಕೆ ಹಾಗೂ ವಿಕಲಚೇತನರ ಕುರಿತು ಪೋಪ್ ಮಾತು

ಪೋಪ್ ಫ್ರಾನ್ಸಿಸ್ ಅವರು ಜಿ7 ಶೃಂಗಸಭೆಯಲ್ಲಿ ಒಳಗೊಳ್ಳುವಿಕೆ ಹಾಗೂ ವಿಕಲಚೇತನರ ಕುರಿತು ಮಾತನಾಡಿದ್ದಾರೆ. ವಿಭಿನ್ನವಾದರೂ ನಾವೆಲ್ಲರೂ ಒಂದೇ. ಎಲ್ಲರನ್ನೂ ನಾವು ಒಳಗೊಳ್ಳುವ ಮೂಲಕ ಪ್ರತಿಯೊಬ್ಬರ ಮಾನವ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಅವರು ವಿಶ್ವದ ವಿವಿಧ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ವರದಿ: ಫ್ರಾನ್ಸೆಸ್ಕಾ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಜಿ7 ಶೃಂಗಸಭೆಯಲ್ಲಿ ಒಳಗೊಳ್ಳುವಿಕೆ ಹಾಗೂ ವಿಕಲಚೇತನರ ಕುರಿತು ಮಾತನಾಡಿದ್ದಾರೆ. ವಿಭಿನ್ನವಾದರೂ ನಾವೆಲ್ಲರೂ ಒಂದೇ. ಎಲ್ಲರನ್ನೂ ನಾವು ಒಳಗೊಳ್ಳುವ ಮೂಲಕ ಪ್ರತಿಯೊಬ್ಬರ ಮಾನವ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಅವರು ವಿಶ್ವದ ವಿವಿಧ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ಈ ಶೃಂಗಸಭೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ವಿಕಲಚೇತನ ವ್ಯಕ್ತಿಗಳಿಗಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಅಭಿನಂದಿಸಿ, ಅವರ ಸೇವೆಯನ್ನು ಶ್ಲಾಘಿಸಿದರು. ಆ ಮೂಲಕ ಅವರು ಮಾಡುತ್ತಿರುವ ಬಧ್ಧತೆಯ ಸೇವೆಯನ್ನು ಆಶೀರ್ವದಿಸಿದರು. ನೀವು ಮಾಡುತ್ತಿರುವ ಸೇವೆಯು ಕೇವಲ ಸೇವೆ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕೆ ನೀವು ನೀಡುತ್ತಿರುವ ಅಪರಿಮಿತ ಕೊಡುಗೆಯಾಗಿದೆ ಎಂದು ಹೇಳಿದರು.

ವಿಕಲಚೇತನರನ್ನು ಸಮಾಜದ ಎಲ್ಲಾ ವ್ಯಕ್ತಿಗಳು ಯಾವುದೇ ಹಿಂಜರಿಕೆ ಅಥವಾ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮಾಜವು ಯೋಜನೆಗಳನ್ನು ರೂಪಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಅಭಿಪ್ರಾಯ ಪಟ್ಟರು. ಇವರನ್ನು ಒಳಗೊಳ್ಳುವುದು ಕೇವಲ ಸಾಮಾಜಿಕ ಕಾರ್ಯವಲ್ಲ ಬದಲಿಗೆ ನಾವು ಅವರಿಗೆ ಒದಗಿಸುತ್ತಿರುವ ನ್ಯಾಯವಾಗಿದೆ ಎಂದು ಅವರು ಹೇಳಿದರು.

ವಿಕಲಚೇತನ ವ್ಯಕ್ತಿಗಳಿಗೆ ಗೌರವಾನ್ವಿತ ಉದ್ಯೋಗಗಳನ್ನು ನೀಡುವುದು, ಅವರನ್ನು ಕ್ರೀಡೆ ಮುಂತಾದ ಕ್ರಿಯಾ ಚಟುವಟಿಕೆಗಳಲ್ಲಿ ಭಾಗವಹಿಸು ಅವಕಾಶವನ್ನು ನೀಡುವುದು ಸೇರಿದಂತೆ ಅವರನ್ನು ಒಳಗೊಳ್ಳುವ ವಿವಿಧ ಕಾರ್ಯಗಳನ್ನು ಮಾಡುವ ಮೂಲಕ ನಾವು ಅವರನ್ನು ನಮ್ಮ ಮಧ್ಯೆ ಜೀವಿಸುವುದಕ್ಕೆ ಅವಕಾಶ ನೀಡಬೇಕಿದೆ ಎಂದು ನೆರೆದಿದ್ದವರಿಗೆ ಹೇಳಿದರು.  

17 October 2024, 17:57