Il Papa, per unit� nella Chiesa mai mettere al centro s� stessi

ವಿಶ್ವಗುರು ಫ್ರಾನ್ಸಿಸ್: ದೇವರಿಂದ ಪ್ರೀತಿಸಲ್ಪಡುವುದೇ ದೊಡ್ಡ ಆಸ್ತಿ

ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಭಾನುವಾರದ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೇವರಿಂದ ಪ್ರೀತಿಸಲ್ಪಡುವುದೇ ಬಹು ದೊಡ್ಡ ಆಸ್ತಿಯೆಂದು ಅವರು ಜನತೆಗೆ ಕಿವಿ ಮಾತನ್ನು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಭಾನುವಾರದ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೇವರಿಂದ ಪ್ರೀತಿಸಲ್ಪಡುವುದೇ ಬಹು ದೊಡ್ಡ ಆಸ್ತಿಯೆಂದು ಅವರು ಜನತೆಗೆ ಕಿವಿ ಮಾತನ್ನು ಹೇಳಿದ್ದಾರೆ.

ಇಂದಿನ ಶುಭ ಸಂದೇಶದಲ್ಲಿ ಯುವಕನ್ನೊಬ್ಬ ಏಸುಕ್ರಿಸ್ತರನ್ನು ನಿತ್ಯ ಜೀವನವನ್ನು ಪಡೆಯಲು ನಾನು ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಶುಭ ಸಂದೇಶದ ಈ ಘಟನೆಯ ಕುರಿತು ವಿಶ್ವಗುರು ಫ್ರಾನ್ಸಿಸ್ ಅವರು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ. "ಆರಂಭದಲ್ಲಿ ಆ ಯುವಕ ಯೇಸು ಸ್ವಾಮಿಯ ಬಳಿಗೆ ಬಂದು ನಿತ್ಯಜೀವವನ್ನು ಪಡೆಯಲು ನಾನು ಏನನ್ನು ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಿದಾಗ, ಅದಕ್ಕೆ ಪ್ರತ್ಯುತ್ತರವಾಗಿ, ಪ್ರಭು ಕ್ರಿಸ್ತರು ಹೋಗು ನಿನ್ನಲ್ಲಿರುವುದನ್ನೆಲ್ಲ ದಾನ ಮಾಡಿ, ಸರಳತೆಯ ಬದುಕನ್ನು ಜೀವಿಸಲು ನನ್ನನ್ನು ಹಿಂಬಾಲಿಸು ಎಂದು ಹೇಳುತ್ತಾರೆ. ಆದರೆ ಅವನು ಬಹಳ ಶ್ರೀಮಂತನಾದ ಕಾರಣ ತನ್ನ ಆಸ್ತಿಪಾಸ್ತಿಯನ್ನು ಮಾರಲು ಇಷ್ಟಪಡುವುದಿಲ್ಲ. ಈ ಕಾರಣದಿಂದಾಗಿ ಅವನು ಹೊರಟು ಹೋಗುತ್ತಾನೆ. ಮೊದಲಿಗೆ ಏಸುವನ್ನು ನೋಡಲು ಓಡಿ ಬಂದ ಆತ ನಂತರ ಬೇಸರದಿಂದ ನಡೆದು ಹೋಗುತ್ತಾನೆ. ಬಹುತೇಕ ನಮ್ಮ ಜೀವನದಲ್ಲಿ ನಾವು ಸಹ ಈ ಶ್ರೀಮಂತ ಯುವಕನಂತೆ ಆಗಿದ್ದೇವೆ. ನಾವು ನಮ್ಮ ಲೌಕಿಕ ಬದುಕನ್ನು ತ್ಯಜಿಸಲು ಸಿದ್ದರಿಲ್ಲ." ಎಂದು ವಿಶ್ವಗುರು ಫ್ರಾನ್ಸಿಸ್ ಈ ಸಂದರ್ಭದಲ್ಲಿ ಹೇಳಿದರು.

ಅಂತಿಮವಾಗಿ ವಿಶ್ವಗುರು ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ನಾವು ಈ ಶ್ರೀಮಂತ ಯುವಕನಂತೆ ಆಗಬಾರದು. ಯೇಸುವನ್ನು ಹಿಂಬಾಲಿಸಲು ಹಾಗೂ ಅವರ ಹೆಜ್ಜೆಗಳಲ್ಲಿ ಸದಾ ನಡೆಯಲು ನಮ್ಮ ಲೌಕಿಕ ಬದುಕನ್ನು ತ್ಯಜಿಸಲು ನಾವು ಸದಾ ಸಿದ್ದರಿರಬೇಕು ಎಂದು ಹೇಳಿದರು. ಇದೇ ವೇಳೆ ಅವರು ವಿಶ್ವಶಾಂತಿಗಾಗಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಶಾಂತಿಗಾಗಿ ತಮ್ಮ ಮನವಿಯನ್ನು ಮತ್ತೆ ಪುನರುಚ್ಚರಿಸಿದರು.

13 October 2024, 18:02