ದೃಢೀಕರಣ ಪವಿತ್ರಾತ್ಮರ ವರದಾನಗಳನ್ನು ಸಂವಹಿಸುತ್ತದೆ: ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ತಮ್ಮ ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ದೃಢೀಕರಣ ಸಂಸ್ಕಾರ ಎಂಬುದು ನಮ್ಮೆಲ್ಲರೊಳಗೆ ಪವಿತ್ರಾತ್ಮರ ವರದಾನಗಳನ್ನು ಸಂವಹಿಸುತ್ತದೆ ಎಂದು ಹೇಳಿದ್ದಾರೆ.
ಜ್ಯೂಬಿಲಿ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನಾವು ಆಧ್ಯಾತ್ಮಿಕವಾಗಿ ಪವಿತ್ರಾತ್ಮರನ್ನು ಹಾಗೂ ಅವರ ವರದಾನಗಳನ್ನು ನಮ್ಮೊಳಗೆ ಬರಮಾಡಿಕೊಳ್ಳಲು ಸಿದ್ಧರಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಧರ್ಮಸಭೆಯಲ್ಲಿ ಪವಿತ್ರಾತ್ಮರ ಪಾತ್ರದ ಕುರಿತು ಮಾತನಾಡಿದರು. ಕ್ರೈಸ್ತರ ನಡುವೆ ಸಂಧಾನ ಹಾಗೂ ಸಂವಾದ ಏರ್ಪಡಿಸುವಲ್ಲಿ ಪವಿತ್ರತ್ಮರು ನೆರವಾಗುತ್ತಾರೆ. ಅವರು ನಮ್ಮ ಬದುಕಿನ ಜೀವಾಳವಾಗಿದ್ದಾರೆ ಎಂದು ಹೇಳಿದ್ದಾರೆ. ಪವಿತ್ರಾತ್ಮರೆ ಪ್ರಭುವಾಗಿದ್ದಾರೆ ಹಾಗೂ ನಿಜ ದೇವರಾಗಿದ್ದಾರೆ ಎಂದು ಅವರು ಪುನರುಚ್ಚರಿಸಿದರು.
ಕ್ರೈಸ್ತರಾದ ನಾವೆಲ್ಲರೂ ಸಮಾಧಾನದಿಂದ ಇರಬೇಕು ಏಕೆಂದರೆ ಪವಿತ್ರಾತ್ಮರು ನಮಗೆ ನಿತ್ಯ ಜೀವನವನ್ನು ನೀಡಿದ್ದಾರೆ. ಕ್ರೈಸ್ತರು ಮಾತ್ರವಲ್ಲದೆ ನಿತ್ಯ ಜೀವವನ್ನು ದೇವರಲ್ಲಿ ವಿಶ್ವಾಸ ಬಿಡುವ ಎಲ್ಲರಿಗೂ ನೀಡಿದ್ದಾರೆ. ಇದುವೇ ಅವರು ನಮಗೆ ನೀಡಿರುವ ಪರಮೋನ್ನತ ಸಮಾಧಾನವಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ನುಡಿದರು. ಪವಿತ್ರಾತ್ಮರು ನೀಡುವ ವಿಶ್ವಾಸವು ನಮಗೆ ವಿಶ್ವಾಸ ಹಾಗೂ ಭರವಸೆಯನ್ನು ನೀಡುತ್ತದೆ. ಈ ಮೂಲಕ ಕ್ರಿಸ್ತಿಯ ಬದುಕಿಗೆ ಆಧಾರವಾಗುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.