ಹುಡುಕಿ

2024.10.20 Santa Messa e Canonizzazione dei Beati Manuel Ruiz Lopez e sette Compagni; Francesco, Mooti e Raffaele Massabki; Giuseppe Allamano; Marie-Leonie Paradis; Elena Guerra

'ದಿಲೇಶಿತ್ ನೊಸ್': ಯೇಸುವಿನ ಪವಿತ್ರ ಹೃದಯದ ಕುರಿತು ಪತ್ರವನ್ನು ಪ್ರಕಟಿಸಲಿರುವ ಪೋಪ್ ಫ್ರಾನ್ಸಿಸ್

ವಿಶ್ವಗುರು ಫ್ರಾನ್ಸಿಸರು ಗುರುವಾರ ಯೇಸುವಿನ ಪವಿತ್ರ ಹೃದಯದ ಕುರಿತು 'ದಿಲೇಶಿತ್ ನೊಸ್' (ಆತ ನಮ್ಮನ್ನು ಪ್ರೀತಿಸಿದರು) ಎಂಬ ಪತ್ರವನ್ನು ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸರು ಗುರುವಾರ ಯೇಸುವಿನ ಪವಿತ್ರ ಹೃದಯದ ಕುರಿತು 'ದಿಲೇಶಿತ್ ನೊಸ್' (ಆತ ನಮ್ಮನ್ನು ಪ್ರೀತಿಸಿದರು) ಎಂಬ ಪತ್ರವನ್ನು ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ. ಇದು ವಿಶ್ವಗುರು ಫ್ರಾನ್ಸಿಸರ ನಾಲ್ಕನೇ ಪತ್ರವಾಗಿದ್ದು, ವಿಶ್ವವು ಅನೇಕ ಭಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ ಪ್ರಕಟಿಸಲಾದುದಾಗಿದೆ.

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಇಂದು ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು, ವಿಶ್ವಗುರುಗಳ ಈ ಪತ್ರದ ಸಂಪೂರ್ಣ ಹೆಸರು - 'ದಿಲೇಶಿತ್ ನೊಸ್: ಯೇಸುವಿನ ಪವಿತ್ರ ಹೃದಯದ ದೈವಿಕ ಹಾಗೂ ಮಾನವೀಕ ಪ್ರೀತಿಯ ಪತ್ರ'  ಎಂಬುದಾಗಿದೆ. ಈ ಕುರಿತು ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು ಜೂನ್ 5 ರಂದು ಹೇಳಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಶ್ವಗುರು ಫ್ರಾನ್ಸಿಸ್ ಅವರ ಪ್ರಕಾರ ಅವರ ಈ ಪತ್ರವು ಬೈಬಲ್ ಶ್ರೀಗ್ರಂಥದ ವಾಕ್ಯದ ಚಿಂತನೆಗಳು ಸೇರಿದಂತೆ, ವಿಶ್ವಗುರುಗಳ ಹಿಂದಿನ ಭೋದನೆಗಳು, ಧರ್ಮಸಭೆಯ ತತ್ವಗಳನ್ನು ಒಳಗೊಂಡಿದೆ. ಇದು ಯೇಸುವಿನ ಆಪರಿಮಿತ ಪ್ರೀತಿಯನ್ನು ಜಗತ್ತಿಗೆ ಮತ್ತೊಮ್ಮೆ ತಿಳಿಯಪಡಿಸುವಲ್ಲಿ ರಚಿತವಾಗಿದೆ ಎಂದು ಹೇಳಿದ್ದಾರೆ. ಈ ಪತ್ರದಲ್ಲಿ ಯೇಸುವಿನ ಪವಿತ್ರ ಹೃದಯದಿಂದ ಪ್ರೇರಿತಗೊಂಡು ಆಗಿರುವ ಸುಮಾರು ಸಾವಿರಕ್ಕೂ ಹೆಚ್ಚು ಪವಾಡಗಳ ಕುರಿತು ಹೇಳಲಾಗಿದೆ.   

21 October 2024, 14:41