ಹುಡುಕಿ

ಪೋಪ್ ಫ್ರಾನ್ಸಿಸ್: ಕ್ರೀಡೆಗಳು ಜೀವನದ ಗೀತೆಗಳಾಗಿವೆ

ಇಟಲಿಯ ಪ್ರಖ್ಯಾತ ಕ್ರೀಡಾಪತ್ರಿಕೆ "ಕೊರಿಯೆರೆ ದೆಲ್ಲ ಸ್ಪೋರ್ಟ್ ಸ್ತಾದಿಯೋ"ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರೈಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಅದರ ಒಂದು ಘಟಕವನ್ನು ಉದ್ಘಾಟಿಸಿದ್ದಾರೆ. ಹೀಗೆ ಉದ್ಘಾಟಿಸುವಾಗ, ಅವರು ಕ್ರೀಡೆಗಳು ಜೀವನದ ಗೀತೆಗಳಾಗಿವೆ ಎಂದು ಹೇಳಿದ್ದಾರೆ.

ವರದಿ: ಕೀಲ್ಚೇ ಗುಸ್ಸಿ, ಅಜಯ್ ಕುಮಾರ್

ಇಟಲಿಯ ಪ್ರಖ್ಯಾತ ಕ್ರೀಡಾಪತ್ರಿಕೆ "ಕೊರಿಯೆರೆ ದೆಲ್ಲ ಸ್ಪೋರ್ಟ್ ಸ್ತಾದಿಯೋ"ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರೈಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಅದರ ಒಂದು ಘಟಕವನ್ನು ಉದ್ಘಾಟಿಸಿದ್ದಾರೆ. ಹೀಗೆ ಉದ್ಘಾಟಿಸುವಾಗ, ಅವರು ಕ್ರೀಡೆಗಳು ಜೀವನದ ಗೀತೆಗಳಾಗಿವೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು "ಈ ನೂರು ವರ್ಷಗಳಲ್ಲಿ ನೀವು ಒಂದು ಸುಂದರ ಓಟವನ್ನು ಓಡಿದ್ದೀರಿ" ಎಂದು ಹೇಳಿದ್ದಾರೆ. ಚಿಕ್ಕಂದಿನಲ್ಲಿ ಅರ್ಜೆಂಟೀನಾ ದೇಶದಲ್ಲಿ ತಾವು ಫುಟ್ಬಾಲ್ ಆಟವನ್ನು ಆಡುತ್ತಿದ್ದ ಕುರಿತು ವಿಶ್ವಗುರು ಫ್ರಾನ್ಸಿಸ್ ಅವರು ನೆನಪಿಸಿಕೊಂಡರು. ಯಾವುದೇ ಕ್ರೀಡೆಯನ್ನು ಆಡುವಾಗ ಸೋದರತ್ವದ ಭಾವ ಎಂಬುದು ನಮ್ಮ ಮನದಲ್ಲಿರಬೇಕು ಏಕೆಂದರೆ ನಾವು ಮೈದಾನದಲ್ಲಿ ಶತ್ರುಗಳ ವಿನಃ ನಿಜ ಜೀವನದಲ್ಲಲ್ಲ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಕ್ರೀಡಾ ಸ್ಪೂರ್ತಿಯ ಕುರಿತು ಹೇಳಿದರು.

ಕ್ರೀಡೆ ಎಂಬುದು ಜೀವನದ ಪಾಠಗಳನ್ನು ಕಲಿಸುತ್ತದೆ ಎಂದು ಹೇಳಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಯಾವುದೇ ಕ್ರೀಡೆಯನ್ನು ಆಡುವಾಗ ಸುರಕ್ಷಿತ ಪ್ರದೇಶಗಳಲ್ಲಿ ಆಡಬೇಕು ಎಂದು ಅವರಿಗೆ ನೆನಪಿಸಿದರು. ಅಂತಿಮವಾಗಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ನಾವೆಲ್ಲರೂ ಒಗ್ಗಟ್ಟಿನಿಂದ ಇರುವುದೇ ಯಾವುದೇ ಕ್ರೀಡೆಯ ಉದ್ದೇಶವಾಗಿರಬೇಕು ಎಂದು ಹೇಳಿದರು.

20 October 2024, 17:48