ಪೋಪ್ ಫ್ರಾನ್ಸಿಸ್: ವಿಶ್ವಸಂಸ್ಥೆಯ ಶಾಂತಿಪಾಲಕ ಪಡೆಗಳನ್ನು ಗೌರವಿಸಬೇಕು
ವರದಿ: ಜೋಸೆಫ್ ಟಲೋಚ್, ಅಜಯ್ ಕುಮಾರ್
ಇಸ್ರೇಲ್ ಸೇನೆಯು ಲೆಬನಾನ್ ದೇಶದಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲಕ ಪಡೆಗಳ ಮೇಲೆ ದಾಳಿಯನ್ನು ಮಾಡಿದೆ. ಈ ದಾಳಿಯನ್ನು ಖಂಡಿಸಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಶಾಂತಿಪಾಲಕ ಪಡೆಗಳ ಮೇಲೆ ದಾಳಿಯನ್ನು ಮಾಡಬಾರದು ಹಾಗೂ ವಿಶ್ವಸಂಸ್ಥೆಯ ಪಡೆಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳು ಕುರಿತು ಮಾತನಾಡಿದರು. ಹೀಗೆ ಮಾತನಾಡಿದ ಅವರು, ಕಾರಣಗಳು ಯಾವುದೇ ಇರಲಿ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳು ಕೊನೆಗೊಳ್ಳಬೇಕು. ಉಭಯ ದೇಶಗಳು ಈ ಕೂಡಲೇ ಕದನ ವಿರಾಮವನ್ನು ಘೋಷಿಸಿ, ಮೂಲಕ ಮಾನವೀಯತೆಯನ್ನು ಮೆರೆಯಬೇಕು ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ಇಸ್ರೇಲ್ ದೇಶವು ಲೆಬನಾನ್ ದೇಶದಲ್ಲಿನ ವಿಶ್ವಸಂಸ್ಥೆಯ ಶಾಂತಿಪಾಲಕ ಪಡೆಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದ ಹಿನ್ನೆಲೆ ಅದನ್ನು ಖಂಡಿಸಿದ್ದಾರೆ ಹಾಗೂ ಯಾವುದೇ ಕಾರಣಕ್ಕೂ ಶಾಂತಿಪಾಲಕ ಪಡೆಗಳ ಮೇಲೆ ದಾಳಿ ಮಾಡಬಾರದು ಹಾಗೂ ಅವುಗಳ ಕಾರ್ಯವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಯುದ್ಧ ಎಂಬುದು ಒಂದು ರೀತಿಯ ಮನೋಕಲ್ಪನೆಯಾಗಿದ್ದು ಇದು ಎಂದಿಗೂ ವಾಸ್ತವವಾಗುವುದಿಲ್ಲ. ಯುದ್ಧ ಎಂದಿಗೂ ಸೋಲಾಗಿದೆ. ಯುದ್ಧದಿಂದ ಯಾವುದೇ ಲಾಭವಿಲ್ಲ. ಇದರಿಂದ ಹಿಂಸೆ ಹೆಚ್ಚಾಗಿ ಸಾವಿರಾರು ಮುಗ್ಧ ಜೀವಗಳು ಬಲಿಯಾಗುತ್ತವೆ. ಯುದ್ಧದ ಮೊದಲ ಬಲಿಪಶುಗಳು ಮಕ್ಕಳಾಗಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ. ಇದೆ ವೇಳೆ ಅವರು ಶಾಂತಿ ಮರುಸ್ಥಾಪನೆಯ ಕುರಿತ ತಮ್ಮ ವಿನಂತಿಯನ್ನು ಮತ್ತೆ ನವೀಕರಿಸಿದ್ದಾರೆ. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಿರಬೇಕು. ಯಾವುದೇ ಭಿನ್ನಾಭಿಪ್ರಾಯ ಅಥವಾ ಸಮಸ್ಯೆಗಳನ್ನು ಸಂವಾದ ಹಾಗೂ ಶಾಂತಿಯ ಮೂಲಕವೇ ನಾವು ಪರಿಹರಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಾಂತಿಯ ಮನವಿಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.