ಹುಡುಕಿ

ಯುದ್ಧದ ಕುರಿತು ಪೋಪ್: ಮಕ್ಕಳು ಹಾಗೂ ಕುಟುಂಬಗಳು ಯುದ್ಧದ ಮೊದಲ ಗುರಿಗಳಾಗಿವೆ

ಪೋಪ್ ಫ್ರಾನ್ಸಿಸ್ ಅವರು ಇಂದು ಸಾರ್ವಜನಿಕರನ್ನು ಭೇಟಿ ಮಾಡುತ್ತಾ ಯುದ್ಧದ ಕುರಿತು ಮಾತನಾಡಿದ್ದಾರೆ. ಯುದ್ಧ ಎಂಬುದು ಎರಡೂ ಕಡೆಗಳ ಸೋಲಾಗಿದ್ದು, ಇದರ ಮೊದಲ ಗುರಿಯೇ ಮಕ್ಕಳನ್ನು ಹಾಗೂ ಕುಟುಂಬಗಳನ್ನು ನಾಶ ಮಾಡುವುದು ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ವಿಶ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ರೀತಿಯ ಯುದ್ಧಗಳು ಕೊನೆಗೊಂಡು, ಶಾಂತಿ ಸ್ಥಾಪಿಯವಾಗಲಿ ಎಂದು ಹೇಳುವ ಮೂಲಕ ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಛರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಶಾಂತಿ ಎಂಬುದು ಪವಿತ್ರಾತ್ಮರ ಕೊಡುಗೆಯಾಗಿದೆ" ಎಂದು ಹೇಳಿದರು. "ನಿನ್ನೆ ಸುಮಾರು ನೂರಾ ಐವತ್ತು ಜನರನ್ನು ಕೊಲ್ಲಲಾಗಿದೆ ಎಂದು ನಾನು ಕೇಳ್ಪಟ್ಟೆ! ಕುಟುಂಬಗಳಿಗೂ, ಮಕ್ಕಳಿಗೂ ಇದರಲ್ಲಿ ಯಾವ ಆಸಕ್ತಿ ಇದೆ? ಯುದ್ಧಕ್ಕೂ ಇವರಿಗೂ ಏನು ಸಂಬಂಧ? ಆದರೂ ಸಹ ಯುದ್ಧದ ಮೊದಲ ಬಲಿಪಶುಗಳೇ ಇವರು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಗಾಝಾ ಸೇರಿದಂತೆ ಯುದ್ಧದ ದಾಳಿಗೆ ಒಳಗಾಗಿರುವ ಪ್ರದೇಶಗಳ ಕುರಿತು ಪೋಪ್ ಫ್ರಾನ್ಸಿಸ್ ಮಾತನಾಡಿದರು. ಈ ವೇಳೆ ಅವರು ಯಾವುದೇ ಯುದ್ಧದಲ್ಲಿ ಸಾಕಷ್ಟು ಹಿಂಸೆ ಹಾಗೂ ನೋವುಗಳನ್ನು ಅನುಭವಿಸುವುದು ಮುಗ್ಧ ಜನರಾಗಿದ್ದಾರೆ. ವಿಶೇಷವಾಗಿ ಮಕ್ಕಳು ಯುದ‌್ಧಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುದ್ಧದಿಂದ ಭಾಧಿತವಾಗಿರುವ ಪ್ರದೇಶಗಳಿಗೆ ಅಗತ್ಯವಾಗಿ ಮಾನವೀಯ ನೆರವು ದಕ್ಕಬೇಕು" ಎಂದು ಹೇಳಿದ್ದಾರೆ.

ಇತ್ತೀಚೆಗೆ ಇಸ್ರೇಲ್ ಹಮಾಸ್ ಉಗ್ರರ ಮೇಲಿನ ದಾಳಿಯನ್ನು ತೀವ್ರವಾಗಿಸಿದ್ದು, ದಿನೇ ದಿನೇ ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

30 October 2024, 18:13