ಹುಡುಕಿ

ಪೋಪ್ ಫ್ರಾನ್ಸಿಸ್: ಪ್ಯಾಲೆಸ್ತೀನ್ ಅಮಾನವೀಯ ದಾಳಿಗಳನ್ನು ಎದುರಿಸುತ್ತಿದೆ

ವಿಶ್ವಗುರು ಫ್ರಾನ್ಸಿಸ್ ಅವರು ಜಗತ್ತಿನಲ್ಲಿ ಶಾಂತಿ ಮರುಸ್ಥಾಪನೆಗಾಗಿ ತಮ್ಮ ಮನವಿಯನ್ನು ಮತ್ತೆ ಪುನರುಚ್ಚರಿಸಿದ್ದಾರೆ. ಉಕ್ರೆನ್ ದೇಶದಿಂದ ಬರುತ್ತಿರುವ ಮೃತರಾದವರ ಸಂಖ್ಯೆಗಳು ಅವರನ್ನು ದಿಗ್ಭ್ರಮೆಗೊಳಿಸಿವೆ. ಈ ವೇಳೆ ಅವರು ಪ್ಯಾಲೆಸ್ತೀನ್ ಅಮಾನವೀಯ ದಾಳಿಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ವರದಿ: ಕೀಲ್ಛೇ ಗುಸ್ಸಿ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ಜಗತ್ತಿನಲ್ಲಿ ಶಾಂತಿ ಮರುಸ್ಥಾಪನೆಗಾಗಿ ತಮ್ಮ ಮನವಿಯನ್ನು ಮತ್ತೆ ಪುನರುಚ್ಚರಿಸಿದ್ದಾರೆ. ಉಕ್ರೆನ್ ದೇಶದಿಂದ ಬರುತ್ತಿರುವ ಮೃತರಾದವರ ಸಂಖ್ಯೆಗಳು ಅವರನ್ನು ದಿಗ್ಭ್ರಮೆಗೊಳಿಸಿವೆ. ಈ ವೇಳೆ ಅವರು ಪ್ಯಾಲೆಸ್ತೀನ್ ಅಮಾನವೀಯ ದಾಳಿಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದ ನಿಧನರಾಗಿರುವ ಮನುಷ್ಯರ ಸಂಖ್ಯೆಯ ಅಂಕಿ ಅಂಶಗಳು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಸಿಕ್ಕಿದೆ. ಈ ಕುರಿತು ಮಾತನಾಡಿರುವ ಅವರು ಈ ಈ ಅಂಕಿ ಅಂಶಗಳು ಬಹಳ ಆತಂಕಕಾರಿಯಾಗಿವೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು ಯುದ್ಧಗಳಿಂದ ದೇಶಗಳು ನರಳುತ್ತವೆ. ದೇಶಗಳೆಂದರೆ ಯಾರು? ದೇಶಗಳೆಂದರೆ ಅಲ್ಲಿರುವ ಮನುಷ್ಯರಾಗಿದ್ದಾರೆ. ಮುಗ್ಧ ಜನಗಳು ವಿಶೇಷವಾಗಿ ಮಹಿಳೆಯರು ಹಾಗೂ ಪುಟ್ಟ ಮಕ್ಕಳು ಯುದ್ಧಕ್ಕೆ ಬಲಿಪಶುಗಳಾಗಿ ಸಾವಿರಾರು ಸಂಖ್ಯೆಯಲ್ಲಿ ಮೃತ ಹೊಂದಿದ್ದಾರೆ. ಯುದ್ಧ ಎಂದಿಗೂ ಸೋಲಾಗಿದೆ. ಯುದ್ಧಕ್ಕೆ ಜಯ ಎಂಬುದು ಇಲ್ಲ. ಹೀಗಿರುವಾಗ, ಜಗತ್ತು ಹಿಂಸೆಯನ್ನು ಮರೆತು ಮತ್ತೆ ಶಾಂತಿಯಿಂದ ಬಾಳಬೇಕಿದೆ ಎಂದು ಹೇಳಿದರು.

23 October 2024, 15:26