ಶಸ್ತ್ರಚಿಕಿತ್ಸಕರಿಗೆ ವಿಶ್ವಗುರು ಫ್ರಾನ್ಸಿಸ್: ಯಾತನೆ ಪಡುತ್ತಿರುವವರ ಜೀವಗಳ ರಕ್ಷಕರಾಗಿರಿ

ಇಟಲಿಯ ಶಸ್ತ್ರಚಿಕಿತ್ಸಕರ ಗುಂಪನ್ನು ಭೇಟಿ ಮಾಡಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಶಸ್ತ್ರಚಿಕಿತ್ಸಕರಿಗೆ ಜನರ ಜೀವಗಳನ್ನು ವಿಶೇಷವಾಗಿ ಯಾತನೆ ಪಡುತ್ತಿರುವ ಜನರ ಜೀವನಗಳನ್ನು ರಕ್ಷಿಸುವಂತೆ ಉತ್ತೇಜನ ನೀಡಿದ್ದಾರೆ. ಆ ಮೂಲಕ ಮನುಷ್ಯತ್ವಕ್ಕೆ ಸೇವೆಯನ್ನು ಮಾಡಬೇಕು ಎಂದು ಹೇಳಿದ್ದಾರೆ.

ವರದಿ: ದೇಬೋರ ಕ್ಯಾಸ್ಟಲಿನೊ ಲುಬೋವ್, ಅಜಯ್ ಕುಮಾರ್

ಇಟಲಿಯ ಶಸ್ತ್ರಚಿಕಿತ್ಸಕರ ಗುಂಪನ್ನು ಭೇಟಿ ಮಾಡಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಶಸ್ತ್ರಚಿಕಿತ್ಸಕರಿಗೆ ಜನರ ಜೀವಗಳನ್ನು ವಿಶೇಷವಾಗಿ ಯಾತನೆ ಪಡುತ್ತಿರುವ ಜನರ ಜೀವನಗಳನ್ನು ರಕ್ಷಿಸುವಂತೆ ಉತ್ತೇಜನ ನೀಡಿದ್ದಾರೆ. ಆ ಮೂಲಕ ಮನುಷ್ಯತ್ವಕ್ಕೆ ಸೇವೆಯನ್ನು ಮಾಡಬೇಕು ಎಂದು ಹೇಳಿದ್ದಾರೆ.

"ನೀವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ನಿಮ್ಮ ಕೈಯಲ್ಲಿ ಯಾವುದೇ ಮನುಷ್ಯ ದೇಹವಿದ್ದರೆ ಅದು ದೇವರ ಅನುರೂಪದಲ್ಲಿ ಉಂಟಾಗಿರುವುದಾಗಿದೆ. ಆದುದರಿಂದ ಅದನ್ನು ನೀವು ಬಳಸುವಾಗ ಆರೋಗ್ಯದ ಕೃತಿಗಾರರಾಗಿರಿ." ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು. ಇಟಾಲಿಯನ್ ಸೊಸೈಟಿ ಆಫ್ ಸರ್ಜನ್ಸ್ ಸಂಸ್ಥೆಯ ಹಲವಾರು ವೈದ್ಯರನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಅವರಿಗೆ ಬಡವರಿಗಾಗಿ ವಿಶೇಷ ಕಾಳಜಿಯನ್ನು ವ್ಯಕ್ತ ಪಡಿಸುವಂತೆ ಕೋರಿದ್ದಾರೆ.

ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆಯನ್ನು ಮಾಡುವಾಗ ನಿಮ್ಮ ಮುಂದಿರುವುದು ಯಾವುದೋ ದೇಹದ ಭಾಗವಲ್ಲ. ಜೀವ ಇರುವ ಮನುಷ್ಯ ಎಂಬುದನ್ನು ನೀವು ಎಂದಿಗೂ ಮರೆಯಬಾರದು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಶಸ್ತ್ರಚಿಕಿತ್ಸಕರಿಗೆ ತಿಳಿ ಹೇಳಿದರು. ವಿಜ್ಞಾನವು ಎಂದಿಗೂ ಮಾನವನ ಬೆಳವಣಿಗೆಗಾಗಿ ಇದೆ ಎಂಬುದನ್ನು ನೀವು ಮರೆಯಬಾರದು ಎಂದು ಹೇಳಿದರು.

ಶುಭಸಂದೇಶದಲ್ಲಿ ಕ್ರಿಸ್ತರು ಹೇಳುವ ಸಾಮತಿಯಲ್ಲಿ ಬರುವ "ಸದಯ ಸಮಾರಿತ"ನ ಉದಾಹರಣೆಯನ್ನು ನಾವು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

16 October 2024, 18:10