ಸಿನೊಡ್ ಮಾಹಿತಿ: ಅಕ್ಟೋಬರ್ 7 ರಂದು ಉಪವಾಸ ಮತ್ತು ಪ್ರಾರ್ಥನೆ ಆಚರಿಸಲಿರುವ ಸಿನೋಡ್ ಸದಸ್ಯರು

ಸಿನೋಡ್ ಸದಸ್ಯರು ಅಕ್ಟೋಬರ್ 7 ರಂದು ಪೋಪ್ ಫ್ರಾನ್ಸಿಸ್ ಅವರ ಕರೆಯ ಹಿನ್ನೆಲೆ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನು ಆಚರಿಸಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಆರಂಭವಾಗಿತ್ತು. ಇದೀಗ ಈ ಯುದ್ಧ ಆರಂಭವಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಈ ದಿನವನ್ನು ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದರು.

ವರದಿ: ಇಸಬೆಲ್ಲಾ ಪೀರೋ, ಡೆಬೋರಾ ಕ್ಯಾಸ್ಟಲೀನೊ ಲುಬೋವ್, ಅಜಯ್ ಕುಮಾರ್

ಸಿನೋಡ್ ಸದಸ್ಯರು ಅಕ್ಟೋಬರ್ 7 ರಂದು ಪೋಪ್ ಫ್ರಾನ್ಸಿಸ್ ಅವರ ಕರೆಯ ಹಿನ್ನೆಲೆ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನು ಆಚರಿಸಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಆರಂಭವಾಗಿತ್ತು. ಇದೀಗ ಈ ಯುದ್ಧ ಆರಂಭವಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಈ ದಿನವನ್ನು ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದರು.   

ಇನ್ನುಳಿದಂತೆ ಸಿನೋಡ್ ಎರಡನೇ ಅಧಿವೇಶನದಲ್ಲಿ 356 ಸದಸ್ಯರು ಭಾಗವಹಿಸಿದ್ದು, ಇಂದು ಬೆಳಿಗ್ಗೆ ನಡೆದ ಸಭೆಗೆ 365 ಸದಸ್ಯರು ಹಾಜರಾಗಿದ್ದರು ಎಂದು ವ್ಯಾಟಿಕನ್ ಮಾಧ್ಯಮ ಪೀಠದ ಉಸ್ತುವಾರಿಯಾಗಿರುವ ಡಾ. ಪೌಲ್ ರುಫ್ಫಿನಿ ಅವರು ಹೇಳಿದರು. ಈ ವೇಳೆ ಸದಸ್ಯರನ್ನು ಗುಂಪುಗಳಂತೆ ವಿಂಗಡಿಸಲಾಗಿ, ಅವರಿಗೆ ವಿವಿಧ ಶಿರ್ಷಿಕೆಗಳ ಕುರಿತು ಚರ್ಚಿಸಿ, ಒಂದು ಉಪಸಂಹಾರಕ್ಕೆ ಬರುವಂತೆ ಸೂಚಿಸಲಾಗಿತ್ತು.

ಈ ಚರ್ಚೆಯಲ್ಲಿ ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ, ವಿಶೇಷವಾಗಿ ಮಹಿಳಾ ಸೇವಾದರ್ಶಿಗಳ ಪಾತ್ರದ ಕುರಿತು ಚರ್ಚಿಸುವಂತೆ ಕೋರಲಾಗಿತ್ತು. ಚರ್ಚೆಯ ನಂತರ ಎಲ್ಲಾ ಸದಸ್ಯರು ತಮ್ಮ ಚರ್ಚೆಯ ಮುಖ್ಯಾಂಶಗಳನ್ನು ಹಂಚಿಕೊಂಡರು. ಇದೇ ವೇಳೆ ಕ್ಷಮೆಯ ಮಹತ್ವದ ಕುರಿತು ಪ್ರಬೋಧನೆಯನ್ನು ನೀಡಲಾಯಿತು. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರ ಅಕ್ಟೋಬರ್  7 ರ ಕರೆಯ ಕುರಿತೂ ಸಹ ಚರ್ಚಿಸಲಾಗಿದೆ.

04 October 2024, 15:42