ಅಕ್ಟೋಬರ್ 7 ರಂದು ಶಾಂತಿಗಾಗಿ ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದ ಪೋಪ್ ಫ್ರಾನ್ಸಿಸ್

ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಆರಂಭವಾಗಿ ಒಂದು ವರ್ಷವಾಗುತ್ತಿರುವ ಹಿನ್ನೆಲೆ, ಅಕ್ಟೋಬರ್ 7 ರಂದು ಶಾಂತಿಗಾಗಿ ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಆರಂಭವಾಗಿ ಒಂದು ವರ್ಷವಾಗುತ್ತಿರುವ ಹಿನ್ನೆಲೆ, ಅಕ್ಟೋಬರ್ 7 ರಂದು ಶಾಂತಿಗಾಗಿ ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ. 

"ನಮ್ಮ ಇತಿಹಾಸದ ಈ ನಾಟಕೀಯ ಸನ್ನಿವೇಷದಲ್ಲಿ, ಯುದ್ಧದ ಗಾಳಿಯೂ ಎಲ್ಲಾ ವಯೋಮಾನದ, ವಿವಿಧ ಬದುಕಿನ ಹಿನ್ನೆಲೆಯ ಜನರನ್ನು ಬಾಧಿಸುತ್ತಿರುವಾಗ, ಜಗತ್ತಿನ ಕ್ರೈಸ್ತ ಸಮುದಾಯವು ತನ್ನ ದೈವಕರೆಯಾದ ಸೇವೆಯನ್ನು ಕಾರ್ಯಪ್ರವೃತ್ತಗೊಳಿಸಬೇಕಿದೆ" ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಈ ಮಾತಿಗಳನ್ನು ಹದಿನಾರನೇ ಸಿನೋಡ್ ಸಾರ್ವತ್ರಿಕ ಅಧಿವೇಶನಕ್ಕೂ ಮುಂಚಿತವಾಗಿ ಅರ್ಪಿಸಿದ ಬಲಿಪೂಜೆಯಲ್ಲಿ ನುಡಿದರು. ಅಕ್ಟೋಬರ್ 6 ರಂದು ಸಿನೋಡ್ ಸಭೆಯ ಎಲ್ಲಾ ಸದಸ್ಯರು ತಮ್ಮೊಂದಿಗೆ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಪ್ರಾರ್ಥಿಸಲು ಬರುವಂತೆ ಪೋಪ್ ಫ್ರಾನ್ಸಿಸ್ ಅವರು ಆಹ್ವಾನವಿತ್ತರು. ಇದೇ ವೇಳೆ ಅವರು "ಅಂದು ನಾನು ಮಾತೆ ಮರಿಯಮ್ಮನವರಲ್ಲಿ ಹೃದಯಂಗಮವಾಗಿ ಶಾಂತಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದರು. 

"ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯೋಣ. ಪರಸ್ಪರ ಅಗತ್ಯತೆಗಳನ್ನು ಅರಿತು ನೆರವಾಗುತ್ತಾ ನಡೆಯೋಣ. ಪವಿತ್ರಾತ್ಮರ ತಂಗಾಳಿಯಲ್ಲಿ ನಾವು ಮುನ್ನಡೆಯೋಣ" ಎಂದು ಪೋಪ್ ಫ್ರಾನ್ಸಿಸ್ ಅಂತಿಮವಾಗಿ ಹೇಳಿದರು. 

ಈ ರೀತಿಯಾಗಿ ಪೋಪ್ ಫ್ರಾನ್ಸಿಸ್ ಅವರು ಶಾಂತಿ ಸ್ಥಾಪನೆಯ ಕುರಿತು ತಮ್ಮ ಮನವಿಯನ್ನು ಮತ್ತೆ ಪುನರುಚ್ಛರಿಸಿದರು.  

 

02 October 2024, 18:47