ಸಿನೋಡ್ ಕುರಿತು ಬಿಷಪ್ ಕೈರಲ್ಲಾ: ಲೆಬಾನನ್ ದೇಶದಿಂದ ನಾನು ಕ್ಷಮೆಯ ಸಂದೇಶವನ್ನು ತಂದಿದ್ದೇನೆ
ವರದಿ: ವ್ಯಾಟಿಕನ್ ನ್ಯೂಸ್
ಅಕ್ಟೋಬರ್ 5 ರಂದು ಸಿನೋಡ್ ಕುರಿತ ಮಾಧ್ಯಮ ಹೇಳಿಕೆಯಲ್ಲಿ ಲೆಬಾನನ್ ಧರ್ಮಾಧ್ಯಕ್ಷ ಮೌನಿರ್ ಖೈರಲ್ಲಾ ಅವರು ಲೆಬಾನನ್ ದುಸ್ಥಿತಿಯ ಕುರಿತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಐದು ವರ್ಷದ ಮಗುವಾಗಿದ್ದಾಗ ಅವರ ಪೋಷಕರನ್ನು ಕೊಲೆ ಮಾಡಲಾಯಿತು. ಆದರೂ ಅವರು ತಮ್ಮ ಪೋಷಕರ ಹಂತಕನನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದಾರೆ.
ಲೆಬಾನನ್ ದೇಶವು ಮಧ್ಯಪ್ರಾಚ್ಯದಲ್ಲಿ ಕ್ರೈಸ್ತರು, ಯೆಹೂದ್ಯರು ಹಾಗೂ ಮುಸ್ಲೀಮರು ಶಾಂತಿಯುತವಾಗಿ ಜೀವಿಸಬಹುದಾದ ಒಂದೇ ಒಂದು ದೇಶವಾಗಿದೆ ಎಂದು ಹೇಳಿರುವ ಖೈರಲ್ಲಾ ಅವರು, ಲೆಬಾನನ್ ಶಾಂತಿಯ ದೇಶವಾಗಿದೆ. ಶಾಂತಿಯ ಸಂದೇಶವನ್ನು ತರುವ ದೇಶವಾಗಿದೆ. ಆ ದೇಶದಿಂದ ನಾನು ಕ್ಷಮೆಯ ಸಂದೇಶವನ್ನು ಹೊತ್ತು ತಂದಿದ್ದೇನೆ ಎಂದು ಸಿನೋಡ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದರೊಂದಿಗೆ ಅವರು ಲೆಬಾನನ್ ದೇಶದ ಪ್ರಸ್ತುತ ಸ್ಥಿತಿಗತಿಗಳು, ಅಲ್ಲಿನ ಜನರ ಅಭಿಲಾಷೆಗಳು, ಶಾಂತಿಯುತ ಬದುಕು, ಸಂಘರ್ಷಗಳ ಕುರಿತು ಮಾತನಾಡಿ, ಎಲ್ಲರೂ ಬಯಸುವುದು ಶಾಂತಿಯನ್ನು. ಈ ಶಾಂತಿಯನ್ನು ನಮ್ಮಲ್ಲಿ ಮೂಡಿಸಬೇಕೆಂದು ಪ್ರಾರ್ಥಿಸುವುದು ನಮ್ಮೆಲ್ಲರ ಕಾಯಕವಾಗಿದೆ ಎಂದು ಅವರು ನುಡಿದಿದ್ದಾರೆ.