ಕಥೋಲಿಕ ದಾನಿಗಳಿಗೆ ಪೋಪ್ ಫ್ರಾನ್ಸಿಸ್: ಯೇಸುವಿನ ಪ್ರೀತಿಯನ್ನು ಹಂಚಿರಿ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದಲ್ಲಿ ಕಥೋಲಿಕ ದಾನಿಗಳ ಸಂಸ್ಥೆ (ಸಿಪಿಎನ್: ಕ್ಯಾಥೋಲಿಕ್ ಫಿಲಾಂಥ್ರಫಿಸ್ಟ್ಸ್ ನೆಟ್ವರ್ಕ್) ಯ ಸದಸ್ಯರುಗಳನ್ನು ಭೇಟಿ ಮಾಡಿದರು. ಈ ವೇಳೆ ಅವರು ಕಥೋಲಿಕ ದಾನಿಗಳ ಮಾಡುತ್ತಿರುವ ಒಳ್ಳೆಯ ಕಾರ್ಯಗಳನ್ನು ಶ್ಲಾಘಿಸಿದರು.
"ಪ್ರೀತಿಗೆ ಎಲ್ಲವನ್ನೂ ಬದಲಾಯಿಸುವ ಶಕ್ತಿ ಇದೆ." ಎಂದು ಹೇಳುವ ಮೂಲಕ ಪ್ರೀತಿಯ ಮಹತ್ವವನ್ನು ಪೋಪ್ ಫ್ರಾನ್ಸಿಸ್ ಅವರು ಕಥೋಲಿಕ ದಾನಿಗಳಿಗೆ ನೆನಪಿಸಿದರು. ಇದೇ ವೇಳೆ ಅವರು ದೇವರ ಪ್ರೀತಿಯನ್ನು ನೀವೆಲ್ಲರೂ ನಿಮ್ಮೆಲ್ಲಾ ಕಾರ್ಯಗಳಲ್ಲಿ ಹಂಚಿಕೊಳ್ಳಬೇಕು ಎಂದು ಕರೆ ನೀಡಿದರು.,
ಕಥೋಲಿಕ ದಾನಿಗಳು ರೋಮ್ ನಗರಕ್ಕೆ ಆಧ್ಯಾತ್ಮಿಕ ಪ್ರಯಾಣ ಹಾಗೂ ಧ್ಯಾನಕೂಟಕ್ಕಾಗಿ ಆಗಮಿಸಿದ್ದಾರೆ ಎಂಬುದನ್ನು ಅರಿತ ಪೋಪ್ ಫ್ರಾನ್ಸಿಸ್ ಅವರು :ಪ್ರೇಷಿತರ ಸಮಾಧಿಗಳ ಮುಂದೆ ನೀವು ಮಾಡುವ ಪ್ರಾರ್ಥನೆಗಳನ್ನು ದೇವರು ಅಂಗೀಕರಿಸಿ, ಇನ್ನೂ ಹೆಚ್ಚಿನ ಒಳಿತನ್ನು ನೀವು ಧರ್ಮಸಭೆಗೆ ಮಾಡುವಂತಾಗಲಿ" ಎಂದು ಹೇಳಿದರು. "ದೇವರ ಸಾಮ್ರಾಜ್ಯವನ್ನು ಕಟ್ಟುವ ನಿಮ್ಮ ಕಾಯಕಲ್ಪವು ಮತ್ತಷ್ಟು ಹೆಚ್ಚಾಗಲಿ ಎಂದು ಅವರು ಹರಸಿದರು.
"ಇತರರಿಗೆ ಸೇವೆ ಸಲ್ಲಿಸುವ ಕಥೋಲಿಕ ದಾನಿಗಳ ಸಂಸ್ಥೆಯ ಮನೋಭಾವವು ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವಂತಾಗಲಿ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ನಿಮ್ಮಿಂದ ದೇವರ ಪ್ರೀತಿ ಜಗದ ಮೂಲೆಗಳಿಗೆ ಹರಡಲಿ" ಎಂದು ಹೇಳಿದರು.