ಒಂದೇ ತಂಡವಾಗಿ ಕಾರ್ಯನಿರ್ವಹಿಸಿರಿ: ಇಟಲಿಯ ಮೀನುಗಾರ ಸಮುದಾಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿಶ್ವಗುರು ಫ್ರಾನ್ಸಿಸ್ ಕಿವಿಮಾತು
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಕುರಿತು ರೋಮ್ ನಗರದಲ್ಲಿ ಇಟಲಿಯ ಮೀನುಗಾರ ಸಮುದಾಯದ ಸಾವಿರಾರು ಸದಸ್ಯರು ಸಮಾವೇಶವನ್ನು ಹಮ್ಮಿಕೊಂಡಿದ್ದರು. ಇದೆ ವೇಳೆ, ಈ ಮೀನುಗಾರರ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಮೀನುಗಾರಿಕೆ ಹಾಗೂ ಸಾರ್ವಜನಿಕ ಆರೋಗ್ಯ ವೃತ್ತಿಗಳಲ್ಲಿ ತಂಡವಾಗಿ ಕಾರ್ಯನಿರ್ವಹಿಸುವುದು ಹಾಗೂ ಐಕ್ಯತೆಯಿಂದ ಇರುವುದು ಎಷ್ಟು ಪ್ರಮುಖವಾಗಿದೆ ಎಂಬುದರ ಕುರಿತು ಮನವರಿಕೆ ಮಾಡಿದರು.
ಯೂರೋಪ್ ಖಂಡದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಚರ್ಚೆಯನ್ನು ನಡೆಸಲು ಸುಮಾರು ಐದು ಸಾವಿರದ ಇನ್ನೂರು ಇಟಲಿಯ ಮೀನುಗಾರ ಸಮುದಾಯದ ಪ್ರತಿನಿಧಿಗಳು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನೆರೆದು, ವಿಶ್ವಗುರು ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು.
ತಮ್ಮನ್ನು ಭೇಟಿ ಮಾಡಲು ಆಗಮಿಸಿದ್ದ ಮೀನುಗಾರರ ಪ್ರತಿನಿಧಿಗಳನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಅವರ ವೃತ್ತಿಯ ಮೌಲ್ಯದ ಕುರಿತು ಹಾಗೂ ಅವರ ಸೇವಾ ಕಾರ್ಯದ ಕುರಿತು ಮಾತನಾಡಿದರು. ಅವರ ವೃತ್ತಿಯ ಮೂಲಗಳ ಕುರಿತು ಮಾತನಾಡಿದ ವಿಶ್ವಕರು ಫ್ರಾನ್ಸಿಸ್ ಅವರು ಏಸುಕ್ರಿಸ್ತರು ಸಹ ತಮ್ಮ ಧರ್ಮಸಭೆಯನ್ನು ಮೀನುಗಾರರ ಮೂಲಕವೇ ಕಟ್ಟಿದರು ಎಂಬುದನ್ನು ಅವರಿಗೆ ತಿಳಿಸಿದರು.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸರು ಮೀನುಗಾರಿಕೆ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುವಾಗ ಏಕತೆ ಹಾಗೂ ಒಗ್ಗಟ್ಟಿನಿಂದ ಇರುವುದು ಅತ್ಯಂತ ಪ್ರಮುಖವಾಗಿದೆ. ಇದೇ ವೇಳೆ ನಾವು ಒಂದು ಸೇವ ಕಾರ್ಯಕ್ಕಾಗಿ ಕರೆಯಲ್ಪಟ್ಟಿದ್ದೇವೆ ಎಂಬುದನ್ನು ಮರೆಯದೆ ಕರುಣೆಯಿಂದ ಬಡವರಿಗೆ ಹಾಗೂ ಶೋಷಿತರಿಗೆ ನಾವು ಸೇವೆಯನ್ನು ಸಲ್ಲಿಸಬೇಕಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು.