ಹುಡುಕಿ

ಕಾರ್ಡಿನಲ್ ಟಾಗ್ಲೆ: ಜ್ಯೂಬಿಲಿಯ ಕೇಂದ್ರದಲ್ಲಿ ಹೃದಯವನ್ನು ಕೇಂದ್ರೀಕರಿಸುವುದು

ಇತ್ತೀಚೆಗೆ ಪ್ರಕಟಗೊಂಡ ಪೋಪ್ ಫ್ರಾನ್ಸಿಸ್ ಅವರ ಪತ್ರ "ದಿಲೇಶಿತ್ ನೊಸ್" ಕುರಿತು ಮಾತನಾಡಿರುವ ಕಾರ್ಡಿನಲ್ ಲೂಯಿಸ್ ಅಂತೋನೊಯೊ ಟಾಗ್ಲೆ ಅವರು ಜ್ಯೂಬಿಲಿಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರ ಬರಹಗಳು ಹಾಗೂ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ವರದಿ: ಅಲೆಸಾಂದ್ರೊ ಜಿಸೊಟ್ಟಿ, ಅಜಯ್ ಕುಮಾರ್

ಇತ್ತೀಚೆಗೆ ಪ್ರಕಟಗೊಂಡ ಪೋಪ್ ಫ್ರಾನ್ಸಿಸ್ ಅವರ ಪತ್ರ "ದಿಲೇಶಿತ್ ನೊಸ್" ಕುರಿತು ಮಾತನಾಡಿರುವ ಕಾರ್ಡಿನಲ್ ಲೂಯಿಸ್ ಅಂತೋನೊಯೊ ಟಾಗ್ಲೆ ಅವರು ಜ್ಯೂಬಿಲಿಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರ ಬರಹಗಳು ಹಾಗೂ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಪ್ರಮುಖವಾಗಿದೆ ಎಂದು ಹೇಳಿದ್ದಾರೆ. 

ಈ ಕುರಿತು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಮಾತನಾಡಿರುವ ಕಾರ್ಡಿನಲ್ ಟಾಗ್ಲೆ ಅವರು "ಪೋಪ್ ಫ್ರಾನ್ಸಿಸ್ ಅವರು ಆಶ್ಚರ್ಯಗಳ ಪೋಪ್ ಆಗಿದ್ದಾರೆ. ಪ್ರಸ್ತುತ ಸಿನೋಡ್ ಸಮಾವೇಶವು ನಡೆಯುತ್ತಿರುವುದರಿಂದ ಪೋಪ್ ಫ್ರಾನ್ಸಿಸ್ ಅವರು ಯಾವುದೇ ಪತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೊಂಡಿದ್ದೆ, ಆದರೆ, ಅವರು ಯೇಸುವಿನ ಪ್ರೀತಿಯ ಕುರಿತು ದಿಲೇಶಿತ್ ನೊಸ್ ಎಂಬ ಪತ್ರವನ್ನು ಪ್ರಕಟಿಸಿದ್ದಾರೆ" ಎಂದು ಹೇಳಿದರು.

ಫಿಲಿಫೀನ್ಸ್ ದೇಶಲ್ಲಿ ಯೇಸುವಿನ ಪವಿತ್ರ ಹೃದಯದ ಭಕ್ತಿ ಆಚರಣೆಯು ಅಧಿಕವಾಗಿದ್ದು, ಇದಕ್ಕೆ ಮೂಲ ಕಾರಣ ಯೇಸುವಿನ ಪವಿತ್ರ ಹೃದಯದ ಸೇವಾಕಾರ್ಯದ ತತ್ವವನ್ನು ಹೊಂದಿರುವ ಧಾರ್ಮಿಕ ಸಭೆಗಳು ಎಂದು ಅವರು ಹೇಳಿದ್ದಾರೆ. 

ಇನ್ನೇನು ಜ್ಯೂಬಿಲಿ ವರ್ಷವು ಬರುತ್ತಿದೆ. ಆದ ಕಾರಣ ನಾವು ಈ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಅರ್ಥಮಾಡಿಕೊಳ್ಳಬೇಕು ಮಾತ್ರವಲ್ಲದೆ, ಅವರ ಮಾತುಗಳ ನೆರಳಿನಲ್ಲಿ ಆಧ್ಯಾತ್ಮಿಕವಾಗಿ ನಡೆಯಬೇಕು ಎಂದು ಕಾರ್ಡಿನಲ್ ಲೂಯಿಸ್ ಅಂತೊನಿಯೋ ಟಾಗ್ಲೆ ಅವರು ಹೇಳಿದ್ದಾರೆ.  

05 November 2024, 16:33