ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್: ಮಾತೆ ಮರಿಯಮ್ಮನವರು ನಮ್ಮನ್ನು ಕೈ ಹಿಡಿದು ನಡೆಸುತ್ತಾರೆ

ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್: ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ಭಕ್ತಿಯ ಕುರಿತು ಮಾತನಾಡಿದ್ದಾರೆ ಹಾಗೂ ಮಾತೆ ಮರಿಯಮ್ಮನವರು ನಮ್ಮ ಕರಗಳನ್ನು ಹಿಡಿದು ಆಕೆಯ ಪುತ್ರ ಯೇಸುಕ್ರಿಸ್ತಡೆಗೆ ನಮ್ಮನ್ನು ಕರೆದುಕೊಳ್ಳುತ್ತಾರೆ ಎಂದು ಭಕ್ತಾದಿಗಳಿಗೆ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್: ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ಭಕ್ತಿಯ ಕುರಿತು ಮಾತನಾಡಿದ್ದಾರೆ ಹಾಗೂ ಮಾತೆ ಮರಿಯಮ್ಮನವರು ನಮ್ಮ ಕರಗಳನ್ನು ಹಿಡಿದು ಆಕೆಯ ಪುತ್ರ ಯೇಸುಕ್ರಿಸ್ತರೆಡೆಗೆ ನಮ್ಮನ್ನು ಕರೆದುಕೊಳ್ಳುತ್ತಾರೆ ಎಂದು ಭಕ್ತಾದಿಗಳಿಗೆ ಹೇಳಿದ್ದಾರೆ.

ಮಾತೆ ಮರಿಯಮ್ಮನವರು ನಮಗೆ ಯೇಸುವನ್ನು ತೋರಿಸುತ್ತಾರೆ. ಆಕೆ ಎಂದಿಗೂ ನಮಗೆ ಬಾಗಿಲುಗಳನ್ನು ತೆರೆಯುತ್ತಾರೆ. ಪ್ರಭು ಯೇಸುಕ್ರಿಸ್ತರೆಡೆಗೆ ಆಕೆ ನಮ್ಮನ್ನು ಕೈ ಹಿಡಿದು ಕರ ಹಿಡಿದು ನಡೆಸುತ್ತಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಧರ್ಮಸಭೆಯ ಜೀವನದಲ್ಲಿ ಪವಿತ್ರತ್ಮರ ಕುರಿತು ಧರ್ಮೋಪದೇಶವನ್ನು ಮುಂದುವರಿಸಿದ ವಿಶ್ವಗುರು ಫ್ರಾನ್ಸಿಸ್ ಅವರು, ಮಾತೆ ಮರಿಯಮ್ಮನವರ ಭಕ್ತಿ ಆಚರಣೆಯ ಕುರಿತು ಮಾತನಾಡಿದರು ಹಾಗೂ ಕ್ರೈಸ್ತ ಪ್ರಾರ್ಥನೆಯಲ್ಲಿ ಹಾಗೂ ಸಂಸ್ಕಾರಗಳಲ್ಲಿ ಪವಿತ್ರಾತ್ಮರ ಪಾತ್ರದ ಕುರಿತು ಮಾತನಾಡಿದರು.

ಮಾತೆ ಮರಿಯಮ್ಮನವರು ಏಸುಕ್ರಿಸ್ತರ ಮೊದಲ ಪ್ರೇಷಿತರಾಗಿದ್ದು, ದೇವರ ಜೀವಂತ ಆತ್ಮರಿಂದ ಬರೆದ ಪವಿತ್ರ ಪತ್ರವು ಅವರಾಗಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ನೆರೆದಿದ್ದ ಭಕ್ತಾದಿಗಳಿಗೆ ಹೇಳಿದರು. ಮಾತೆ ಮರಿಯಮ್ಮನವರು ಸದಾ ದೇವರ ಚಿತ್ತಕ್ಕೆ ಮಡಿದರು ಹಾಗೂ ಹೀಗೂ ದೇವರ ಸೇವಕ ಎಂದು ತಮ್ಮನ್ನೇ ತಾವು ಅರ್ಪಿಸಿಕೊಂಡರು. ಅದೇ ರೀತಿ ಅವರ ಮಾದರಿಯಲ್ಲಿ ನಾವು ನಡೆದು ನಮ್ಮ ಜೀವನದಲ್ಲಿ ನಡೆಯುವ ಎಲ್ಲವನ್ನು ದೇವರ ಚಿತ್ತಕ್ಕೆ ಸಮರ್ಪಿಸೋಣ ಎಂದು ಅವರು ಹೇಳಿದರು.

13 November 2024, 16:45