ಹುಡುಕಿ

ಸಕಲ ಆತ್ಮಗಳ ಹಬ್ಬದಂದು ಲಾರೆಂಟಿನೋ ಸಮಾಧಿವನದಲ್ಲಿ ಬಲಿಪೂಜೆ ಅರ್ಪಿಸಿದ ಪೋಪ್

ಸಕಲ ಆತ್ಮಗಳ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಲಾರೆಂಟಿನೋ ಸಮಾಧಿವನಕ್ಕೆ ತೆರಳಿ, ಅಲ್ಲಿ ಎಲ್ಲಾ ಆತ್ಮಗಳಿಗಾಗಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಸಕಲ ಆತ್ಮಗಳ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಲಾರೆಂಟಿನೋ ಸಮಾಧಿವನಕ್ಕೆ ತೆರಳಿ, ಅಲ್ಲಿ ಎಲ್ಲಾ ಆತ್ಮಗಳಿಗಾಗಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ಸಮಾಧಿವನದಲ್ಲಿ ಮೃತ ಮಕ್ಕಳಿಗಾಗಿ ಹಾಗೂ ಹುಟ್ಟುತ್ತಲೇ ಮರಣ ಹೊಂದಿದ ಮಕ್ಕಳಿಗಾಗಿ ಇರುವ ಭೂಸ್ಥಾಪನೆ ಪ್ರದೇಶವಾದ "ಗಾರ್ಡನ್ ಆಫ್ ಏಂಜೆಲ್ಸ್" ನಲ್ಲಿ ಬಲಿಪೂಜೆಯನ್ನು ಪೋಪ್ ಫ್ರಾನ್ಸಿಸ್ ಅರ್ಪಿಸಿದರು.

ಪೋಪ್ ಫ್ರಾನ್ಸಿಸ್ ಅವರು ನಿಗಧಿತ ಸಮಯಕ್ಕೂ ಮುಂಚಿತವಾಗಿ ಇಲ್ಲಿಗೆ ಬಂದರು. ಈ ಸಂದರ್ಭದಲ್ಲಿ ರೋಮ್ ನಗರದ ಮೇಯರ್ ಹಾಗೂ ಸುಮಾರು ನೂರು ಜನ ಭಕ್ತಾಧಿಗಳು ಅಲ್ಲಿದ್ದರು. ಪೋಪ್ ಫ್ರಾನ್ಸಿಸ್ ಅವರು ಇತ್ತೀಚೆಗೆ ನಿಧನರಾದ ಮಕ್ಕಳ ಪೋಷಕರನ್ನು ಭೇಟಿ ಮಾಡಿದರು.

ಪೋಪ್ ಫ್ರಾನ್ಸಿಸ್ ಅವರು ಈ ಬಲಿಪೂಜೆಯಲ್ಲಿ ಪ್ರಭೋದನೆಯನ್ನು ನೀಡಲಿಲ್ಲ. ಇದರ ಬದಲಿಗೆ ಆ ಸಂಧರ್ಭದಲ್ಲಿ ವಿಶೇಷವಾಗಿ ಮೌನದಲ್ಲಿ ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಭೇಟಿ ಮಾಡಿ, ಅವರ ಜೊತೆ ಸಂವಾದವನ್ನು ನಡೆಸಿದರು.

02 November 2024, 16:38