ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಎಲ್ಲದರ ಮೂಲ ಪ್ರೀತಿಯಾಗಿದೆ
ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಪ್ರಾನ್ಸಿಸ್ ಅವರು ಆಜ್ಞೆಗಳಲ್ಲಿ ಅತಿ ದೊಡ್ಡ ಆಜ್ಞೆ ಯಾವುದು ಎಂಬ ಕುರಿತು ಸಂತ ಮಾರ್ಕನ ಶುಭ ಸಂದೇಶದ ವಾಕ್ಯಗಳ ಕುರಿತು ಚಿಂತನೆಯನ್ನು ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈ ಪ್ರಶ್ನೆ ಕೇವಲ ಬೈಬಲ್ ಶ್ರೀಗ್ರಂಥದ ಸಮಯದಲ್ಲಿ ಮಾತ್ರವಲ್ಲದೆ, ಪ್ರಸ್ತುತ ನಮ್ಮ ಕಾಲಘಟ್ಟದಲ್ಲಿಯೂ ಸಹ ಅತ್ಯಂತ ಪ್ರಮುಖ ಪ್ರಶ್ನೆಯಾಗಿದೆ. ಇದನ್ನು ನಾವು ಸಹ ಕೇಳಿಕೊಳ್ಳಬೇಕಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು "ಹೌದುಮ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ನಮ್ಮದೇ ಕ್ರಿಯೆಗಳಲ್ಲಿ ಮಗ್ನರಾಗುತ್ತೇವೆ. ಇದು ಸಹಜವಾಗಿದೆ. ಆದರೆ ನಾವು ಕ್ರಮೇಣ ನಮ್ಮ ಮೂಲವನ್ನು ನಾವು ಹುಡುಕಿ ಅರ್ಥ ಮಾಡಿಕೊಳ್ಳಬೇಕಿದೆ. ಇಂದಿನ ಶುಭ ಸಂದೇಶದಲ್ಲಿ ಯೇಸು ಕ್ರಿಸ್ತರು, ವ್ಯಕ್ತಿಯೊಬ್ಬನಿಗೆ ಹೇಳಿದಂತೆ "ಸ್ವರ್ಗ ಸಾಮ್ರಾಜ್ಯಕ್ಕೆ ಹಾದಿ ಎಂಬುವುದು ದೇವರನ್ನು ಪ್ರೀತಿಸುವುದರಿಂದ ಹಾಗೂ ಅಂತ್ಯಗೆ ನಮ್ಮ ಪರರನ್ನು ಪ್ರೀತಿಸುವುದರಿಂದ ಕಂಡುಕೊಳ್ಳಲು ಸಾಧ್ಯ" ಎಂದು ಹೇಳುತ್ತಾರೆ. ಹೀಗೆ ದೇವರ ಪ್ರೀತಿ ಹಾಗೂ ಪರರ ಪ್ರೀತಿ ಎಂಬುದು ಕ್ರೈಸ್ತ ಬದುಕಿನ ಹೃದಯವಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.
ತ್ರಿಕಾಲ ಪ್ರಾರ್ಥನೆಗೆ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು "ನಾವೆಲ್ಲರೂ ನಮ್ಮ ವಿಶ್ವಾಸ ಹಾಗೂ ಬದುಕಿನ ಮೂಲಕ್ಕೆ ಹಿಂತಿರುಗಬೇಕಾಗಿದೆ. ಏಕೆಂದರೆ ಹೃದಯ ಎಂಬುವುದು ನಮ್ಮ ಬದುಕಿನ ಕೇಂದ್ರಬಿಂದುವಾಗಿದ್ದು ಅಲ್ಲಿಂದಲೇ ನಮ್ಮೆಲ್ಲ ಅಂಶಗಳು ಪ್ರತಿಫಲಿಸುತ್ತವೆ" ಎಂದು ಹೇಳಿದ್ದಾರೆ.
"ಇದೆ ವೇಳೆ ಅವರು ಇತ್ತೀಚೆಗೆ ತಾವು ಬಿಡುಗಡೆ ಮಾಡಿದ ಯೇಸುವಿನ ಪವಿತ್ರ ಹೃದಯದ ಕುರಿತ ಪ್ರೆಷಿತ ಪತ್ರ"ಡಿಲೇಷಿತ್ ನೊಸ್" ಕುರಿತು ಮಾತನಾಡಿದರು.