ಹುಡುಕಿ

Pope Francis leads the Angelus prayer from his window, at the Vatican

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಪ್ರಭುವನ್ನು ಆಲಿಸುವುದು ನಮ್ಮ ಹೃದಯಗಳು ಹಾಗೂ ಜೀವನಕ್ಕೆ ಬೆಳಕನ್ನು ತರುತ್ತದೆ

ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಇಂದಿನ ಈ ಯೊವಾನ್ನನ ಶುಭ ಸಂದೇಶದ ವಾಕ್ಯಗಳನ್ನು ಧ್ಯಾನಿಸಿದ್ದಾರೆ ಹಾಗೂ ದೇವರ ವಾಕ್ಯವು ನಮ್ಮ ಬದುಕಿನಲ್ಲಿ ಮಾರ್ಗದರ್ಶಿಯಾಗಿರಬೇಕು ಎಂದು ಕ್ರೈಸ್ತರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಇಂದಿನ ಈ ಯೊವಾನ್ನನ ಶುಭ ಸಂದೇಶದ ವಾಕ್ಯಗಳನ್ನು ಧ್ಯಾನಿಸಿದ್ದಾರೆ ಹಾಗೂ ದೇವರ ವಾಕ್ಯವು ನಮ್ಮ ಬದುಕಿನಲ್ಲಿ ಮಾರ್ಗದರ್ಶಿಯಾಗಿರಬೇಕು ಎಂದು ಕ್ರೈಸ್ತರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.

ಇಂದು ಅಖಿಲ ವಿಶ್ವದ ಅರಸ ಕ್ರಿಸ್ತ ರಾಜರ ಮಹೋತ್ಸವದ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಅವರು ಯೇಸುವಿನ ಅರಸತ್ವದ ಕುರಿತು ಮಾತನಾಡಿದರು. ಪ್ರಭು ಯೇಸುಕ್ರಿಸ್ತರ ಅರಸತ್ವ ಎಂಬುದು ಸ್ವರ್ಗದ್ದಾಗಿದ್ದು, ಅವರು ಇಡೀ ವಿಶ್ವ, ಭೂಮಂಡಲದ ಅರಸರಾಗಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಇಡೀ ವಿಶ್ವದ ಅರಸರಾಗಿದ್ದರೂ, ನಮಗಾಗಿ ಸೇವಕನಾಗಿ, ಪ್ರಾಣತ್ಯಾಗವನ್ನು ಮಾಡಿದ ನಿಜವಾದ ಅರಸ ಪ್ರಭು ಯೇಸುಕ್ರಿಸ್ತರಿಗೆ ನಾವು ಕಿವಿಗೊಡಬೇಕಿದೆ ಎಂದು ಹೇಳಿದರು.

ಬಡವರು, ಶೋಷಿತರು ಹಾಗೂ ನಿರ್ಗತಿಕರನ್ನು ಮೇಲೆತ್ತಲು ಬಂದ ಪ್ರಭು ಯೇಸುಕ್ರಿಸ್ತರು, ತಮ್ಮ ರಾಜ್ಯಾಧಿಕಾರದೊಂದಿಗೆ ಮತ್ತೆ ಆಗಮಿಸುತ್ತಾರೆ. ಆಗ ಅವರು ಆಗಮಿಸುವಾಗ ನಾವು ಅವರ ರಾಜ್ಯಕ್ಕೆ ಅರ್ಹರಾಗಿರಬೇಕೆಂಬುದು ಅವರ ಅಭಿಲಾಷೆಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಜನತೆಗೆ ಹೇಳಿದರು.

ಹಿಂದೆಂದಿಗಿಂತಲೂ ನಾವು ಈಗ ಪ್ರಭುವಿನ ಮಾತಿಗೆ ಕಿವಿಗೊಡಬೇಕು ಎಂದು ಹೇಳುತ್ತಾ, ತಮ್ಮ ತ್ರಿಕಾಲ ಪ್ರಾರ್ಥನೆಯ ಚಿಂತನೆಯನ್ನು ಅವರು ಮುಕ್ತಾಯಗೊಳಿಸಿದರು.    

24 November 2024, 14:06