ಹುಡುಕಿ

ಕುಶಲಕರ್ಮಿಗಳಿಗೆ ಪೋಪ್: ನೀವು ದೇವರ ಸೃಜನಶೀಲತೆಯ ಸಹಯೋಗಿಗಳು

ಇಟಲಿಯ ನ್ಯಾಷನಲ್ ಕಾನ್ಫೆಡರೇಶನ್ ಆಫ್ ಆರ್ಟೀಸನ್ಸ್ (ಸಿಎನ್ಎ) ಸಂಸ್ಥೆಯ ಕುಶಲಕರ್ಮಿಗಳನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ಕರಕುಶಲತೆ ಎಂಬುದು ಅವರ ಹೃದಯಕ್ಕೆ ಹತ್ತಿರವಾದ ಕೆಲಸ ಎಂದು ಹೇಳಿದ್ದು, ಕುಶಲಕರ್ಮಿಗಳು ದೇವರ ಸೃಜನಶೀಲತೆಯ ಸಹಯೋಗಿಗಳು ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಇಟಲಿಯ ನ್ಯಾಷನಲ್ ಕಾನ್ಫೆಡರೇಶನ್ ಆಫ್ ಆರ್ಟೀಸನ್ಸ್ (ಸಿಎನ್ಎ) ಸಂಸ್ಥೆಯ ಕುಶಲಕರ್ಮಿಗಳನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ಕರಕುಶಲತೆ ಎಂಬುದು ಅವರ ಹೃದಯಕ್ಕೆ ಹತ್ತಿರವಾದ ಕೆಲಸ ಎಂದು ಹೇಳಿದ್ದು, ಕುಶಲಕರ್ಮಿಗಳು ದೇವರ ಸೃಜನಶೀಲತೆಯ ಸಹಯೋಗಿಗಳು ಎಂದು ಹೇಳಿದ್ದಾರೆ.

ನ್ಯಾಷನಲ್ ಕಾನ್ಫೆಡರೇಶನ್ ಆಫ್ ಆರ್ಟೀಸನ್ಸ್ (ಸಿಎನ್ಎ) ಸಂಸ್ಥೆಯ ವಾರ್ಷಿಕ ಸಮಾವೇಶದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಕುಶಲಕರ್ಮಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಕರಕುಶಲತೆ ಎಂಬುದು ನನಗೆ ಅತ್ಯಂತ ಪ್ರಿಯವಾಗಿದೆ. ಏಕೆಂದರೆ ಅದು ಮಾನವ ಕೆಲಸದ ಮೌಲ್ಯವನ್ನು ಹಾಗೂ ಪ್ರಾಮುಖ್ಯತೆಯನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

ಕರಕುಶಲತೆ ಎಂಬುದು ಸೃಜನಶೀಲತೆಗೆ ಸಲ್ಲಿಸುವ ಗೌರವವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. "ಇದು ನಿಮ್ಮನ್ನು ದೇವರ ಸೃಜನಶೀಲತೆಯಲ್ಲಿ ಸಹಯೋಗಿಗಳನ್ನಾಗಿ ಮಾಡುತ್ತದೆ. ಏಕೆಂದರೆ, ದೇವರು ಅತ್ಯಂತ ಮಹಾನ್ ಕುಶಲಕರ್ಮಿಯಾಗಿದ್ದು, ಈ ವಿಶ್ವವನ್ನು ಬಹಳ ಸುಂದರವಾಗಿ ಆವರು ಸೃಷ್ಟಿಸಿದ್ದಾರೆ. ನೀವು ಸಹ ಕೆಲವು ಕಚ್ಛಾ ವಸ್ತುಗಳಿಂದ ಬಹಳ ಸುಂದರವಾದ ಕರಕುಶಲ ವಸ್ತುಗಳನ್ನು ಮಾಡುತ್ತೀರಿ" ಎಂದು ಅವರನ್ನು ಪೋಪ್ ಫ್ರಾನ್ಸಿಸ್ ಅವರು ಶ್ಲಾಘಿಸಿದ್ದಾರೆ.

ಕೆಲವೊಮ್ಮೆ ನಾವು ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸುವಾಗ ದೇವರು ಕೇವಲ ಒಬ್ಬ ಅಂಪೈರ್ ಅಥವಾ ಮೇಲ್ವಿಚಾರಕರು ಎಂದು ನಾವು ಭಾವಿಸುತ್ತೇವೆ. ಆದರೆ, ಅವರು ನಾವು ನಮ್ಮ ಜೀವನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಬಯಸುವವರಾಗಿದ್ದಾರೆ" ಎಂದು ಅರಿತುಕೊಳ್ಳಬೇಕು ಎಂದು ಹೇಳಿದರು.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ಯಾವುದೇ ಸಂದರ್ಭವಿರಲಿ, ದೇವರು ನಮ್ಮನ್ನು ಕೈಬಿಡುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.    

15 November 2024, 16:28