ಹುಡುಕಿ

ಬಾರ್ಬಡೊಸ್ ದೇಶದ ಪ್ರಧಾನಮಂತ್ರಿ ಮಿಯಾ ಮೊಟ್ಲೆ ಅವರೊಂದಿಗೆ ಪೋಪ್ ಫ್ರಾನ್ಸಿಸ್ ಬಾರ್ಬಡೊಸ್ ದೇಶದ ಪ್ರಧಾನಮಂತ್ರಿ ಮಿಯಾ ಮೊಟ್ಲೆ ಅವರೊಂದಿಗೆ ಪೋಪ್ ಫ್ರಾನ್ಸಿಸ್  (VATICAN MEDIA Divisione Foto)

ಬಾರ್ಬಡೊಸ್ ದೇಶದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಗುರುವಾರ ವ್ಯಾಟಿಕನ್ ನಗರದಲ್ಲಿ ಬಾರ್ಬಡೋಸ್ ದೇಶದ ಪ್ರಧಾನಮಂತ್ರಿ ಮಿಯಾ ಅಮೊರ್ ಮೊಟ್ಲೆ ಅವರನ್ನು ಭೇಟಿ ಮಾಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಗುರುವಾರ ವ್ಯಾಟಿಕನ್ ನಗರದಲ್ಲಿ ಬಾರ್ಬಡೋಸ್ ದೇಶದ ಪ್ರಧಾನಮಂತ್ರಿ ಮಿಯಾ ಅಮೊರ್ ಮೊಟ್ಲೆ ಅವರನ್ನು ಭೇಟಿ ಮಾಡಿದ್ದಾರೆ.

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪ್ರಧಾನಮಂತ್ರಿ ಮಿಯಾ ಅಮೊರ್ ಮೊಟ್ಲೆ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಅವರನ್ನು ಭೇಟಿ ಮಾಡಿ ಬಾರ್ಬಡೊಸ್ ದೇಶದಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಚರ್ಚೆ ನಡೆದಿದೆ. ಇದೇ ವೇಳೆ ನಮ್ಮ ಸಾಮಾನ್ಯ ಮನೆಯಾದ ಭೂಮಿಯ ರಕ್ಷಣೆಯ ಕುರಿತು ಹಾಗೂ ಜಾಗತಿಕ ತಾಪಮಾನದ ಕುರಿತೂ ಸಹ ಮಾತುಕತೆಗಳು ನಡೆದಿವೆ ಎಂಬುದು ಬಹಿರಂಗವಾಗಿದೆ.

ಉಭಯ ಪಕ್ಷಗಳ ಭೇಟಿ ಫಲಪ್ರದವಾಗಿದ್ದು, ಪ್ರಧಾನ ಮಂತ್ರಿ ಮಿಯಾ ಅಮೋರ್ ಮೊಟ್ಲೆ ಅವರು ಇಲ್ಲಿಗೆ ವ್ಯಾಟಿಕನ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದರು.    

14 November 2024, 15:43