ಪೋಪ್ ಫ್ರಾನ್ಸಿಸ್: ರಕ್ತದಾನ ಎಂಬುದು ಅನಂತ ಕ್ರೀಸ್ತೀಯ ಪ್ರೀತಿಯ ಸಂಕೇತವಾಗಿದೆ
ಇಟಾಲಿಯನ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಅಸೋಸಿಯೇಷನ್ಸ್ ಸಂಸ್ಥೆಯ ಸದಸ್ಯರುಗಳನ್ನು ಇಂದು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು "ರಕ್ತದಾನ ಎಂಬುದು ಅನಂತ ಕ್ರೀಸ್ತೀಯ ಪ್ರೀತಿಯ ಸಂಕೇತವಾಗಿದೆ" ಎಂದು ಹೇಳಿದ್ದಾರೆ.
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಇಟಾಲಿಯನ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಅಸೋಸಿಯೇಷನ್ಸ್ ಸಂಸ್ಥೆಯ ಸದಸ್ಯರುಗಳನ್ನು ಇಂದು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು "ರಕ್ತದಾನ ಎಂಬುದು ಅನಂತ ಕ್ರೀಸ್ತೀಯ ಪ್ರೀತಿಯ ಸಂಕೇತವಾಗಿದೆ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ರಕ್ತದಾನದ ಆಧ್ಯಾತ್ಮಿಕ ಆಯಾಮದ ಕುರಿತು ಸದಸ್ಯರಿಗೆ ಮನದಟ್ಟು ಮಾಡಿದರು. ಕ್ರೈಸ್ತ ಅಭಿವೃದ್ಧಿಯ ಸಂತೋಷ ಹಾಗೂ ಪ್ರೀತಿಯ ಸಂಕೇತ ರಕ್ತದಾನವಾಗಿದೆ" ಎಂದು ಹೇಳಿದರು.
"ಕೊಡುವುದು ನಮ್ಮ ಬದುಕಿಗೆ ನೂತನ ಅರ್ಥವನ್ನು ಹಾಗೂ ಸಂತೋಷವನ್ನು ತರುತ್ತದೆ. ಕೊಡುವುದರಲ್ಲಿ ಹೆಚ್ಚು ಸಂತೋಷವಿದೆಯೇ ವಿನಃ ಪಡೆಯುವುದರಲ್ಲಲ್ಲ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ರಕ್ತದಾನ ಎಂಬುದು ಕ್ರೈಸ್ತ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳುವ ಪೋಪ್ ಫ್ರಾನ್ಸಿಸ್ ಅವರು ಎಲ್ಲರೂ ಸಹ ರಕ್ತದಾನವನ್ನು ಮಾಡಬೇಕು ಎಂದು ಪ್ರೋತ್ಸಾಹಿಸಿದರು.
09 November 2024, 14:52