ಕಾಲಸಾನ್ಸ್ ಸಭೆಯವರಿಗೆ ಪೋಪ್: ಹೊಸ ಹಾದಿಗಳನ್ನು ಅನ್ವೇಷಿಸಲು ಭಯಪಡಬೇಡಿ

ಕಾಲಸಾನ್ಸ್ ಸಭೆಯವರು ತಮ್ಮ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ಅವರನ್ನು ಉದ್ದೇಶಿಸಿ ಮಾತನಾಡಿದರು. ಸೇವೆಯ ಹಾದಿಯಲ್ಲಿ ಹೊಸ ಹಾದಿಗಳನ್ನು ಅನ್ವೇಷಿಸಲು ಮರೆಯಬೇಡಿ ಎಂದು ಹೇಳಿದರು.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಕಾಲಸಾನ್ಸ್ ಸಭೆಯವರು ತಮ್ಮ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ಅವರನ್ನು ಉದ್ದೇಶಿಸಿ ಮಾತನಾಡಿದರು. ಸೇವೆಯ ಹಾದಿಯಲ್ಲಿ ಹೊಸ ಹಾದಿಗಳನ್ನು ಅನ್ವೇಷಿಸಲು ಮರೆಯಬೇಡಿ ಎಂದು ಹೇಳಿದರು.

ನಿಮ್ಮ ಸ್ಥಾಪಕರಾದ ಸಂತ ಜೋಸೆಫ್ ಕಾಲಸಾನ್ಸ್ ಅವರು ಶಿಕ್ಷಣದ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟರು. ಅವರೊಂದಿಗೆ ನೀವು ಸಹ ಮಕ್ಕಳಿಗೆ ವಿಶೇಷವಾಗಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವಾಗ ಅವರ ಹಾದಿಯಲ್ಲಿಯೇ ಮುನ್ನಡೆಯಿರಿ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಈ ಧಾರ್ಮಿಕ ಸಭೆಯ ಸದಸ್ಯರಿಗೆ ಹೇಳಿದರು.

ಮುಂದುವರೆದು ಮಾತನಾಡಿದ ಅವರು "ನಿಮ್ಮ ಸ್ಥಾಪಕರು ಬೀದಿಯಲ್ಲಿನ ಮಕ್ಕಳಿಗಾಗಿ ತಮ್ಮ ಜೀವನದ ಯೋಜನೆಯನ್ನು ತೊರೆಯಲು ಸಿದ್ದರಾಗಿದ್ದರು. ಅದರಂತೆ ಅವರ ಭವಿಷ್ಯವನ್ನು ಲೆಕ್ಕಿಸದೆ ಈ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಏಳಿಗೆಗಾಗಿ ಅವಿರತ ಸೇವೆಯನ್ನು ಮಾಡಿದರು. ಅವರು ಎಲ್ಲವನ್ನು ಹಾಗೂ ಎಲ್ಲದನ್ನು ದೇವರ ಅನುಗ್ರಹಕ್ಕೆ ಅರ್ಪಿಸಿದರು" ಎಂದು ಹೇಳಿದರು.

"ಯುವ ಸಮೂಹಕ್ಕೆ ನೀವು ಶಿಕ್ಷಣವನ್ನು ಮಾತ್ರ ನೀಡದೆ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ನೀವು ಬುನಾದಿಯನ್ನು ಹಾಕುತ್ತಿದ್ದೀರಿ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ನೀವೆಲ್ಲರೂ ಒಂದೇ ಕುಟುಂಬವಾಗಿ, ಆತ್ಮರ ಕೃಪೆಯಿಂದ ಒಗ್ಗಟ್ಟಿನಲ್ಲಿ ಜೀವಿಸುವುದಕ್ಕಾಗಿ ನಾನು ನಿಮಗೆ ಅಭಿನಂದನೆಗಳನ್ನು ತಿಳಿಸುತ್ತೇನೆ" ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

28 November 2024, 16:31