ನೀವು ನ್ಯಾಯ, ದಾನಶೀಲತೆ ಹಾಗೂ ಸತ್ಯವನ್ನು ಪ್ರೀತಿಸಬೇಕು: ಕ್ಯಾನನ್ ಲಾ ಪರಿಣಿತರಿಗೆ ವಿಶ್ವಗುರು ಫ್ರಾನ್ಸಿಸ್ ಕಿವಿಮಾತು
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ರೋಮನ್ ರೋಟ ಆಯೋಜಿಸಿರುವ ಕೋರ್ಸ್ ಒಂದರಲ್ಲಿ ಭಾಗವಹಿಸಲು ಆಗಮಿಸಿರುವ ಕ್ಯಾನನ್ ಲಾ ಪರಿಣಿತರಿಗೆ ವಿಶ್ವಗುರು ಫ್ರಾನ್ಸಿಸ್ ಅವರು ಹೇಗೆ ನ್ಯಾಯ, ದಾನಶೀಲತೆ ಹಾಗೂ ಸತ್ಯ ಎಂಬುದು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎಂಬ ಕುರಿತು ವಿವರಿಸಿದ್ದಾರೆ.
"ನ್ಯಾಯ ಹಾಗೂ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಧೈರ್ಯ ಹಾಗೂ ಉದಾರ ಮನೋಭಾವದಿಂದ ಕಾರ್ಯನಿರತರಾಗಲು ಜನರಿಗೆ ಪ್ರೀತಿ ಎಂಬುದು ಸ್ಪೂರ್ತಿಯನ್ನು ನೀಡುತ್ತದೆ" ಎಂದು ಹೇಳುವ ಮೂಲಕ ವಿಶ್ವಗುರು ಫ್ರಾನ್ಸಿಸ್ ಅವರು ರೋಮನ್ ರೋಟ ಆಯೋಜಿಸಿರುವ ಕ್ಯಾನನ್ ಲಾ ಕುರಿತ ಕೋರ್ಸ್ ಅನ್ನು ಉದ್ಘಾಟಿಸಿದ್ದಾರೆ.
ಧರ್ಮಸಭೆಯ ಅತ್ಯುನ್ನತ ನ್ಯಾಯಾಲಯವಾಗಿರುವ ರೋಮನ್ ರೋಟ ಹಾಗೂ ಅದರ ಅಡಿಯಲ್ಲಿ ಬರುವ ಸಣ್ಣಪುಟ್ಟ ನ್ಯಾಯಾಲಯಗಳು ಸೇವಾ ಕಾರ್ಯ ಎಂಬುದು ನ್ಯಾಯವನ್ನು ಹಾಗೂ ಸತ್ಯವನ್ನು ಒದಗಿಸುವುದಾಗಿದೆ. ಕ್ಯಾನನ್ ಲಾ ಪರಿಣಿತರು ಧರ್ಮಸಭೆಯ ವಕೀಲರಾಗಿದ್ದು ಸತ್ಯದಿಂದ ನ್ಯಾಯವನ್ನು ಹಾಗೂ ಉದಾರ ಮನೋಭಾವದಿಂದ ಶಾಂತಿಯನ್ನು ಒದಗಿಸಬೇಕು ಎಂದು ಹೇಳಿದ್ದಾರೆ.
ನ್ಯಾಯ ಎಂದರೆ ಸಮುದಾಯದ ಒಟ್ಟಾರೆ ಒಳಿತನ್ನು ಬಯಸುವುದು ಹಾಗೂ ಆ ನ್ಯಾಯವನ್ನು ನೀಡುವಾಗ ದಾನಶೀಲತೆ ಎಂಬುದು ಅತ್ಯಂತ ಪ್ರಮುಖವಾಗುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ. ಧರ್ಮಸಭೆಯ ಕ್ಯಾನನ್ ಲಾ ಪರಿಣಿತರು ಪ್ರೀತಿಯನ್ನು, ದಾನಶೀಲತೆಯನ್ನು ಹಾಗೂ ಸತ್ಯವನ್ನು ಒಳಗೊಳ್ಳಬೇಕು ಎಂದು ಅವರು ಕಿವಿ ಮಾತನ್ನು ಹೇಳಿದ್ದಾರೆ.