ನೇಪಲ್ಸ್'ನ ಆರ್ಚ್'ಬಿಷಪ್ ಬಟ್ಟಾಗ್ಲಿಯ ಅವರನ್ನು ನೂತನ ಕಾರ್ಡಿನಲ್'ಗಳ ಪಟ್ಟಿಗೆ ಸೇರಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಟಲಿಯ ನೇಪಲ್ಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಡೊಮೆನಿಕೊ ಬಟ್ಟಾಗ್ಲಿಯ ಅವರನ್ನು ನೂತನ ಕಾರ್ಡಿನಲ್ಲುಗಳ ಪಟ್ಟಿಗೆ ಸೇರಿಸಿದ್ದು, ಅವರು. ಡಿಸೆಂಬರ್ 8 ರಂದು ರೋಮ್ ನಗರದಲ್ಲಿ ಕಾರ್ಡಿನಲ್ ಪದವಿಯನ್ನು ಪಡೆಯಲಿದ್ದಾರೆ. ಈ ಮೂಲಕ ನೂತನ ಕಾರ್ಡಿನಲ್ಲುಗಳ ಸಂಖ್ಯೆ 21 ಕ್ಕೇರಿದೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಇಟಲಿಯ ನೇಪಲ್ಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಡೊಮೆನಿಕೊ ಬಟ್ಟಾಗ್ಲಿಯ ಅವರನ್ನು ನೂತನ ಕಾರ್ಡಿನಲ್ಲುಗಳ ಪಟ್ಟಿಗೆ ಸೇರಿಸಿದ್ದು, ಅವರು. ಡಿಸೆಂಬರ್ 8 ರಂದು ರೋಮ್ ನಗರದಲ್ಲಿ ಕಾರ್ಡಿನಲ್ ಪದವಿಯನ್ನು ಪಡೆಯಲಿದ್ದಾರೆ. ಈ ಮೂಲಕ ನೂತನ ಕಾರ್ಡಿನಲ್ಲುಗಳ ಸಂಖ್ಯೆ 21 ಕ್ಕೇರಿದೆ.

ಪೋಪ್ ಫ್ರಾನ್ಸಿಸ್ ಅವರು ನೂತನ ಕಾರ್ಡಿನಲ್ಲುಗಳ ಪಟ್ಟಿಯನ್ನು ಪ್ರಕಟಿಸಿದಾಗ ಅದರಲ್ಲಿ 21 ಅಭ್ಯರ್ಥಿಗಳಿದ್ದರು. ಕ್ರಮೇಣ ಇಂಡೋನೇಷಿಯಾದ ಬಿಷಪ್ ಸ್ಯೂಕುರ್ ಅವರು ತಮ್ಮನ್ನು ಕಾರ್ಡಿನಲ್ ಆಗಿ ನೇಮಿಸದಂತೆ ಪೋಪ್ ಫ್ರಾನ್ಸಿಸ್ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆ, ಅದನ್ನು ಮನ್ನಿಸಿ, ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಆಗ ಈ ಸಂಖ್ಯೆ 20 ಕ್ಕೆ ಇಳಿದಿತ್ತು.

ನೇಪಲ್ಸ್ ಮಹಾಧರ್ಮಕ್ಷೇತ್ರದಲ್ಲಿ "ಡಾನ್ ಮಿಮ್ಮೋ" (ಫಾದರ್ ಮಿಮ್ಮೋ) ಎಂದೇ ಪ್ರಖ್ಯಾತರಾಗಿರುವ ಆರ್ಚ್'ಬಿಷಪ್ ಬಟ್ಟಾಗ್ಲಿಯಾ ಅವರು ಬಡವರ, ಶೋಷಿತರ ಹಾಗೂ ಸಮಾಜದ ಮುಖ್ಯವಾಹಿನಿಯಿಂದ ತಿರಸ್ಕೃತರಾಗಿರುವವರ ಪರವಾಗಿ ಪಾಲನಾ ಸೇವೆಯನ್ನು ಮಾಡುವುದಕ್ಕೆ ಖ್ಯಾತರಾಗಿದ್ದಾರೆ.

ಇವರ ನೇಮಕಾತಿಯ ಕುರಿತು ವ್ಯಾಟಿಕನ್ ಮಾಧ್ಯಮ ಕಚೇರಿಯ ಮುಖ್ಯಸ್ಥರಾದ ಮತ್ತಿಯೊ ಬ್ರೂನಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

05 November 2024, 15:40