ಪೋಪ್ ಫ್ರಾನ್ಸಿಸ್: 40 ವರ್ಷಗಳ ಹಿಂದೆ ಚಿಲಿ ಮತ್ತು ಅರ್ಜೆಂಟೀನಾದ ನಡುವಿನ ಯುದ್ಧವನ್ನು ಸಂವಾದ ತಪ್ಪಿಸಿತು

ಚಿಲಿ ಹಾಗೂ ಅರ್ಜೆಂಟೀನಾ ದೇಶದ ನಡುವೆ ಬೀಗಲ್ ನಾಲೆಯ ವಿಚಾರವಾಗಿ ಉಲ್ಬಣಿಸಿದ್ದ ಸುದೀರ್ಘ ಕಾಲದ ಗಡಿ ವಿವಾದವನ್ನು ಬಗೆಹರಿಸಲು ಉಭಯ ದೇಶಗಳು ನವೆಂಬರ್ 29, 1984 ರಲ್ಲಿ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದವು. ಆ ಮೂಲಕ ಶಸ್ತ್ರಾಸ್ತ್ರಗಳ ಯುದ್ಧವಾಗ ಬೇಕಿದ್ದ ಪ್ರಕರಣವು ಕೇವಲ ಮಾತುಕತೆಯಿಂದ ಯಶಸ್ವಿಯಾಗಿ ಮುಕ್ತಾಯಗೊಂಡು, ಯುದ್ಧವನ್ನು ತಪ್ಪಿಸಿತ್ತು.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಅರ್ಜೆಂಟೀನಾ ಮತ್ತು ಚಿಲಿ ದೇಶಗಳ ನಡುವಿನ ಶಾಂತಿ ಒಪ್ಪಂದಕ್ಕೆ 40 ವರ್ಷಗಳಾದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಮಾತನಾಡಿದ್ದಾರೆ. 40 ವರ್ಷಗಳ ಹಿಂದೆ ಚಿಲಿ ಮತ್ತು ಅರ್ಜೆಂಟೀನಾದ ನಡುವಿನ ಯುದ್ಧವನ್ನು ಸಂವಾದ ತಪ್ಪಿಸಿತು ಎಂದು ಹೇಳಿರುವ ಅವರು ನಾವು ಮಾಡಿಕೊಳ್ಳುವ ಒಪ್ಪಂದಗಳು ಯುದ್ಧಗಳನ್ನು ತಪ್ಪಿಸುತ್ತವೆ ಎಂದು ಹೇಳಿದ್ದಾರೆ.

ಚಿಲಿ ಹಾಗೂ ಅರ್ಜೆಂಟೀನಾ ದೇಶದ ನಡುವೆ ಬೀಗಲ್ ನಾಲೆಯ ವಿಚಾರವಾಗಿ ಉಲ್ಬಣಿಸಿದ್ದ ಸುದೀರ್ಘ ಕಾಲದ ಗಡಿ ವಿವಾದವನ್ನು ಬಗೆಹರಿಸಲು ಉಭಯ ದೇಶಗಳು ನವೆಂಬರ್ 29, 1984 ರಲ್ಲಿ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದವು. ಆ ಮೂಲಕ ಶಸ್ತ್ರಾಸ್ತ್ರಗಳ ಯುದ್ಧವಾಗ ಬೇಕಿದ್ದ ಪ್ರಕರಣವು ಕೇವಲ ಮಾತುಕತೆಯಿಂದ ಯಶಸ್ವಿಯಾಗಿ ಮುಕ್ತಾಯಗೊಂಡು, ಯುದ್ಧವನ್ನು ತಪ್ಪಿಸಿತ್ತು.

ಈ ಎರಡೂ ದೇಶಗಳ ಈ ಗಡಿ ವಿವಾದವನ್ನು ಬಗೆಹರಿಸಲು ಅಂದಿನ ವಿಶ್ವಗುರು ಸಂತ ದ್ವಿತೀಯ ಜಾನ್'ಪೌಲರು ಮಧ್ಯಸ್ಥಿಕೆಯನ್ನು ವಹಿಸಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕಿದೆ.

"ಪ್ರಸ್ತುತ ನಡೆಯುತ್ತಿರುವ ಯುದ್ಧಗಳು ಈ ಪ್ರಕರಣದಿಂದ ಸ್ಪೂರ್ತಿಯನ್ನು ಪಡೆಯಬೇಕು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, "ಸಂವಾದಕ್ಕೆ ಯುದ್ಧಗಳನ್ನು ನಿಲ್ಲಿಸುವ ಶಕ್ತಿಯಿದೆ. ನಾಯಕರುಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು" ಎಂದು ಹೇಳುವ ಮೂಲಕ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ತಮ್ಮ ಮನವಿಯನ್ನು ಅವರು ಮತ್ತೆ ಪುನರುಚ್ಛರಿಸಿದರು.

26 November 2024, 13:54