ಕ್ರಿಸ್ತ ರಾಜರ ಕುರಿತು ವಿಶ್ವಗುರು ಫ್ರಾನ್ಸಿಸ್: ಪ್ರೀತಿ ಹಾಗೂ ಸತ್ಯದಿಂದ ದೂರಾಗಬೇಡಿ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಕ್ರಿಸ್ತ ರಾಜರ ಮಹೋತ್ಸವದ ಹಿನ್ನೆಲೆಯಲ್ಲಿ ಬಲಿ ಪೂಜೆಯನ್ನು ಅರ್ಪಿಸಿದ ವಿಶ್ವಗುರು ಫ್ರಾನ್ಸಿಸ್ ಅವರು ಸಮೂಹವು ದೇವರ ಮೇಲಿನ ಪ್ರೀತಿಯನ್ನು ದ್ವಿಗುಣಗೊಳಿಸಬೇಕು. ಜೀವನದಲ್ಲಿ ಇತರರಿಂದ ಅನುಭವಿಸುವ ಆರೋಪಗಳ ಹೊರತಾಗಿಯೂ ಸಹ ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂದು ಕಿವಿ ಮಾತನ್ನು ಹೇಳಿದ್ದಾರೆ.
ಕ್ರಿಸ್ತ ರಾಜರ ಮಹೋತ್ಸವದಂದು ಪ್ರಪಂಚವು ವಿಶ್ವ ಯುವ ದಿನವನ್ನು ಆಚರಿಸುವ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಅವರು ವಿಶ್ವ ಯುವ ದಿನದ ಶಿಲುಬೆಯನ್ನು ಹಾಗೂ ಮಾತೆ ಮರಿಯಮ್ಮನವರ ಪ್ರತಿಮೆಯನ್ನು ಹಸ್ತಾಂತರಿಸಿದ್ದಾರೆ.
2027ರಲ್ಲಿ ಉತ್ತರ ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿ ವಿಶ್ವ ಯುವ ದಿನವನ್ನು ಆಚರಿಸುವ ಹಿನ್ನೆಲೆ ಪೋರ್ಚುಗಲ್ಲಿನ ಯುವಕರು ಶಿಲುಬೆಯನ್ನು ದಕ್ಷಿಣ ಕೊರಿಯಾದ ಯುವ ಸಮೂಹಕ್ಕೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ವಿಶ್ವಗುರು ಫ್ರಾನ್ಸಿಸ್ ಅವರು ಭರವಸೆಯನ್ನು ಕಳೆದುಕೊಳ್ಳದೆ ಕ್ರೈಸ್ತರು ಶುಭ ಸಂದೇಶ ಮೌಲ್ಯಗಳು ಅಳವಡಿಸಿಕೊಂಡು ಜೀವಿಸಬೇಕು ಎಂದು ಹೇಳಿದ್ದಾರೆ. ದೈವಾರಧನಾ ವಿಧಿ ವರ್ಷವು ಮುಕ್ತಾಯಗೊಂಡ ಹಿನ್ನೆಲೆ, ವಿಶ್ವಗುರು ಫ್ರಾನ್ಸಿಸ್ ಅವರು ಕ್ರಿಸ್ತರ ಶಾಶ್ವತ ರಾಜ್ಯ ಬರಲಿದೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಬೇಕು ಎಂದು ಹೇಳಿದರು.
ಮುಂದುವರಿದ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಯುವ ಸಮೂಹವನ್ನು ಉದ್ದೇಶಿಸಿ, ನೀವೆಲ್ಲರೂ ಯೇಸುವಿನಿಂದ ಧೈರ್ಯವನ್ನು ಪಡೆದುಕೊಂಡು ಮುಂದುವರಿಯಬೇಕು. ನಿಮ್ಮ ಹಾದಿಯಲ್ಲಿ ಯಾವುದೇ ಆರೋಪಗಳು ಅಥವಾ ಟೀಕೆಗಳು ವ್ಯಕ್ತವಾದರೆ ಅದರಿಂದ ಎದೆಗುಂದದೆ ಭರವಸೆಯಿಂದ ಶುಭ ಸಂದೇಶವನ್ನು ಸಾರಬೇಕು ಎಂದು ಹೇಳಿದರು. ಅಂತಿಮವಾಗಿ ಜೀವಿಸುವುದು ಪ್ರೀತಿ ಮಾತ್ರ. ಆದುದರಿಂದ ನಾವು ಪ್ರೀತಿಯನ್ನು ವಿಶೇಷವಾಗಿ ದೇವರ ಪ್ರೀತಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.