ಪೋಪ್ ಫ್ರಾನ್ಸಿಸ್: ಧರ್ಮಸಭೆ ತೆರೆದ ಆಸ್ಪತ್ರೆಯಾಗಿದೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರು "ಫೀಲ್ಟ್ ಹಾಸ್ಪಿಟಲ್ ಚರ್ಚಸ್" ಎಂಬ ಸಂಸ್ಥೆಯ ಸದಸ್ಯರುಗಳು ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ, ಅವರ ಸೇವೆಗೆ ಅವರನ್ನು ಪ್ರೋತ್ಸಾಹಿಸಿ, ಹುರಿದುಂಬಿಸಿದರು. ನೀವು ನಿಮ್ಮ ಕಾರ್ಯಗಳ ಮೂಲಕ ಧರ್ಮಸಭೆಯನ್ನು ಒಂದು ತೆರೆದ ಆಸ್ಪತ್ರೆಯನ್ನಾಗಿ ಮಾಡಿದ್ದೀರಿ ಎಂದು ಹೇಳಿದರು.
"ಕ್ರೈಸ್ತ ಬದುಕಿನ ನಿಮ್ಮ ಸಾಕ್ಷಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ದೇವರ ಕರುಣೆ, ಪ್ರೀತಿಯನ್ನು ನಿಮ್ಮ ಕಾರ್ಯಗಳಲ್ಲಿ ಮುಂದುವರೆಸಿ" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಂಸ್ಥೆಯ ಸದಸ್ಯರಿಗೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಯುದ್ಧದ ಕಾರಣಗಳಿಂದ ನೋವನ್ನು ಅನುಭವಿಸುತ್ತಿರುವವರು, ವಲಸಿಗರು ಹಾಗೂ ತಮ್ಮದಲ್ಲದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಖೈದಿಗಳನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸಬೇಕೆಂದು ಕರೆ ನೀಡಿದರು. ಪೋಪ್ ಫ್ರಾನ್ಸಿಸ್ ಅವರು ಇದೇ ವೇಳೆ ಯುದ್ಧದ ಕಾರಣ ಸಾವನ್ನಪ್ಪುತ್ತಿರುವ ಹಾಗೂ ತಮ್ಮ ನಗುವನ್ನೇ ಕಳೆದುಕೊಂಡಿರುವ ಮಕ್ಕಳನ್ನು ನೆನಪಿಸಿಕೊಂಡು, ಅವರಿಗಾಗಿ ಮರುಗಿದರು.
"ನಿಮ್ಮ ಮುಂದಿರುವ ಎಲ್ಲಾ ಅಸಮಾನತೆಗಳನ್ನು ಪವಿತ್ರಾತ್ಮರ ಸಹಾಯದಿಂದ ಸರಿಪಡಿಸಿರಿ" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಭೆಯ ಸದಸ್ಯರಿಗೆ ಕಿವಿಮಾತನ್ನು ಹೇಳಿದರು.