ಸೆಲೆಸ್ಟಿ ಸೌಲೋ: ಹವಾಮಾನ ಬದಲಾವಣೆಯ ಕುರಿತು ಪೋಪ್ ಫ್ರಾನ್ಸಿಸ್ ಅವರ ಕಾಳಜಿಯ
ವರದಿ: ಸಬಾಸ್ಟಿಯನ್ ಸಾನ್ಸನ್ ಫೆರಾರಿ ಮತ್ತು ತಂಡ
ವರ್ಲ್ಡ್ ಮೆಟಿಯೊರೊಲೊಜಿಕಲ್ ಆರ್ಗನೈಸೇಶನ್ನಿನ ಪ್ರಧಾನ ಕಾರ್ಯದರ್ಶಿಯಾಗಿರುವ ಸೆಲೆಸ್ಟಿ ಸೌಲೋ ಅವರು ಪೋಪ್ ಫ್ರಾನ್ಸಿಸ್ ಅವರೊಂದಿಗೆ ನಡೆಸಿದ ಮಾತುಕತೆಯ ಕುರಿತು ಸುದ್ದಿತಾಣಕ್ಕೆ ಮಾಹಿತಿಯನ್ನು ನೀಡಿದ್ದು, ಹವಾಮಾನ ಬದಲಾವಣೆಯ ಕುರಿತು ಪೋಪ್ ಫ್ರಾನ್ಸಿಸ್ ಅವರ ಕಾಳಜಿಯೇ ನಮ್ಮ ಕಾಳಜಿಯೂ ಸಹ ಆಗಿದೆ ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ವಿಶ್ವಸಂಸ್ಥೆಯ ವರ್ಲ್ಡ್ ಮೆಟಿಯೊರೊಲೊಜಿಕಲ್ ಆರ್ಗನೈಸೇಶನ್ನಿನ ಪ್ರಧಾನ ಕಾರ್ಯದರ್ಶಿಯಾಗಿರುವ ಸೆಲೆಸ್ಟಿ ಸೌಲೋ ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ತಮ್ಮ ಮಾತುಕತೆಯಲ್ಲಿ ಹವಾಮಾನ ವೈಪರಿತ್ಯ ಸೇರಿದಂತೆ ಅದಕ್ಕೆ ತೆಗೆದುಕೊಳ್ಳಲಾಗುವ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸೆಲೆಸ್ಟಿ ಸೌಲೋ ಅವರು "ಪೋಪ್ ಫ್ರಾನ್ಸಿಸ್ ಅವರು ಹವಾಮಾನ ವೈಪರಿತ್ಯದ ಕುರಿತು ಬಹಳ ಆತಂಕ ಹಾಗೂ ಕಾಳಜಿಯನ್ನು ಹೊಂದಿದ್ದಾರೆ. ವಿಶ್ವಸಂಸ್ಥೆಯ ವರ್ಲ್ಡ್ ಮೆಟಿಯೊರೊಲೊಜಿಕಲ್ ಆರ್ಗನೈಸೇಶನ್ ಸಂಸ್ಥೆಯು ವ್ಯಾಟಿಕನ್ ಜೊತೆಗೂಡಿ, ಹವಾಮಾನ ವೈಪರಿತ್ಯದ ಕುರಿತು ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.