ಕಳೆದ ವರ್ಷ ಮೃತರಾದ ಕಾರ್ಡಿನಲ್ಲುಗಳು ಹಾಗೂ ಧರ್ಮಾಧ್ಯಕ್ಷರಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಕಳೆದ ಹನ್ನೆರಡು ತಿಂಗಳಲ್ಲಿ ವಿಶ್ವದಾದ್ಯಂತ ಮೃತರಾದ ಕಾರ್ಡಿನಲ್ಲುಗಳು ಹಾಗೂ ಧರ್ಮಾಧ್ಯಕ್ಷರಿಗಾಗಿ ಪೋಪ್ ಫ್ರಾನ್ಸಿಸ್ ಅವರು ಬಲಿಪೂಜೆಯನ್ನು ಅರ್ಪಿಸಿ, ಅವರಿಗಾಗಿ ಪ್ರಾರ್ಥಿಸಿದರು. ನಾವು ಅವರನ್ನು ನೆನಪಿಸಿಕೊಳ್ಳುವುದು, ಅವರಿಗಾಗಿ ನಾವು ವಹಿಸುವ ಮಧ್ಯಸ್ಥಿಕೆಯಾಗಿದೆ ಎಂದು ಅವರು ಹೇಳಿದರು.
ಈ ಬಲಿಪೂಜೆಯಲ್ಲಿನ ತಮ್ಮ ಪ್ರಬೋಧನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಯೇಸುವಿನ ಬಲಗಡೆ ಶಿಲುಬೆಗೇರಿಸಲಾಗಿದ್ದ ಒಳ್ಳೆಯ ಕಳ್ಳನ "ಪ್ರಭುವೇ, ನೀವು ಪರಂಧಾಮದಲ್ಲಿರುವಾಗ ನನ್ನನ್ನು ನೆನಪಿಸಿಕೊಳ್ಳಿರಿ" ಎಂಬ ಮಾತುಗಳನ್ನು ಉದಾಹರಿಸಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ತನ್ನ ಜೀವನದ ಕೊನೆ ಗಳಿಗೆಯಲ್ಲಿ ಆ ಕಳ್ಳನು ತನ್ನ ತಪ್ಪುಗಳನ್ನು ಒಪ್ಪಿಕೊಂಡು, ದೀನತೆಯಿಂದ ದೇವರಿಗೆ ಶರಣಾಗುತ್ತಾನೆ. ಆ ಮೂಲಕ ಯೇಸು ಕ್ರಿಸ್ತರನ್ನು ಆತನ ಹೃದಯಕ್ಕೆ ಬರಮಾಡಿಕೊಳ್ಳುತ್ತಾನೆ. ಪ್ರಭು ಕ್ರಿಸ್ತರೂ ಸಹ ಆತನನ್ನು ಕ್ಷಮಿಸುತ್ತಾರೆ. ಆ ಮೂಲಕ ಅವರು ಸದಾ ನಮಗಾಗಿ ಕಾದಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಧರ್ಮಸಭೆಗಾಗಿ ಸೇವೆಯನ್ನು ಸಲ್ಲಿಸಿ ಮೃತರಾದ ಎಲ್ಲಾ ಕಾರ್ಡಿನಲ್ಲುಗಳು ಹಾಗೂ ಧರ್ಮಾಧ್ಯಕ್ಷರಿಗಾಗಿ ಪ್ರಾರ್ಥಿಸುವಂತೆ ಅವರು ಕರೆ ನೀಡಿದರು.