ಪೋಪ್ ಫ್ರಾನ್ಸಿಸ್: ಸಂವಾದ ಶಸ್ತ್ರಾಸ್ತ್ರಗಳಿಗೆ ಪರ್ಯಾಯವಾಗಲಿ

ಈ ಜಗತ್ತನ್ನು ಬಾಧಿಸುತ್ತಿರುವ ಯುದ್ಧಗಳನ್ನು ನಿಲ್ಲಿಸಲು ಮಾತುಕತೆಗಳು ಪರಿಹಾರವಾಗಿವೆ ಎಂದಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಯುದ್ಧದಿಂದ ಜಗತ್ತಿನಾದ್ಯಂತ ಹಿಂಸೆಯನ್ನು ಅನುಭವಿಸುತ್ತಿರುವ ಹಾಗೂ ಇತ್ತೀಚಿಗೆ ಸ್ಪೇನ್ ದೇಶದಲ್ಲಿ ನಡೆದ ಪ್ರವಾಹದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಜನರಿಗಾಗಿ ನೆರವು ನೀಡುವಂತೆ ಹಾಗೂ ಅವರಿಗಾಗಿ ಪ್ರಾರ್ಥಿಸುವಂತೆ ವಿನಂತಿಸಿಕೊಂಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಈ ಜಗತ್ತನ್ನು ಬಾಧಿಸುತ್ತಿರುವ ಯುದ್ಧಗಳನ್ನು ನಿಲ್ಲಿಸಲು ಮಾತುಕತೆಗಳು ಪರಿಹಾರವಾಗಿವೆ ಎಂದಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಯುದ್ಧದಿಂದ ಜಗತ್ತಿನಾದ್ಯಂತ ಹಿಂಸೆಯನ್ನು ಅನುಭವಿಸುತ್ತಿರುವ ಹಾಗೂ ಇತ್ತೀಚಿಗೆ ಸ್ಪೇನ್ ದೇಶದಲ್ಲಿ ನಡೆದ ಪ್ರವಾಹದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಜನರಿಗಾಗಿ ನೆರವು ನೀಡುವಂತೆ ಹಾಗೂ ಅವರಿಗಾಗಿ ಪ್ರಾರ್ಥಿಸುವಂತೆ ವಿನಂತಿಸಿಕೊಂಡಿದ್ದಾರೆ.

ಇಟಲಿ ದೇಶದ ಸಂವಿಧಾನದ ಪರಿಚ್ಛೇದ 11ರಲ್ಲಿ ಇರುವ ಯುದ್ಧದ ಕುರಿತ ನಿಯಮಗಳನ್ನು ಉಲ್ಲೇಖಿಸಿರುವ ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರ ವಿಶ್ವದಾದ್ಯಂತ ಯುದ್ಧದಲ್ಲಿ ತೊಡಗಿರುವ ದೇಶಗಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂವಾದವನ್ನು ಹಾಗೂ ಮಾತುಕತೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ ಯುದ್ಧ ಹಾಗೂ ಬಡತನದ ಕಾರಣ ನರಳುತ್ತಿರುವ ಜನರಿಗೆ ನೆರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಎಮರ್ಜೆನ್ಸಿ ಎಂಬ ಸಂಸ್ಥೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಸಂವಾದ ಹಾಗೂ ಸಂವಹನದ ಕುರಿತ ಮಾತುಗಳನ್ನು ಆಡಿದ್ದಾರೆ.

ಈ ವೇಳೆ ಇಟಲಿ ದೇಶದ ಸಂವಿಧಾನದ ಪರಿಚ್ಛೇದ 11ರಲ್ಲಿ ಇರುವ ಅಂಶಗಳನ್ನು ಉಲ್ಲೇಖಿಸಿರುವ ಅವರು ಎಲ್ಲರೂ ಸಹ ಈ ಅಂಶಗಳನ್ನು ಮನಗಂಡು ಯುದ್ಧಕ್ಕೆ ಕಾರಣವಾಗಿರುವ ಈ ಅಂಶಗಳನ್ನು ಪರಿಹರಿಸಲು ಹಾಗೂ ಸಂಘರ್ಷವನ್ನು ನಿಲ್ಲಿಸಲು ಸಂಧಾನದ ಮೊರೆ ಹೋಗಬೇಕೆಂದು ಹೇಳಿದ್ದಾರೆ.

ಸ್ಪೇನ್ ದೇಶದ ವೇಲೆನ್ಸಿಯಾ ಪ್ರಾಂತ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಕುರಿತು ಮಾತನಾಡಿರುವ ಅವರು, ಪ್ರವಾಹದಿಂದ ಮರಳುತ್ತಿರುವ ಹಾಗೂ ಸಂಕಷ್ಟಕ್ಕೆ ಈಡಾಗಿರುವ ಜನಗಳಿಗೆ ನೆರವು ನೀಡಬೇಕೆಂದು ಹಾಗೂ ಅವರ ಪುನರ್ವಸತಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕೆಂದು ಭಕ್ತಾದಿಗಳಿಗೆ ಕರೆ ನೀಡಿದರು.

03 November 2024, 16:58