ಪೋಪ್ ಫ್ರಾನ್ಸಿಸ್: ಕ್ರೈಸ್ತ ಸೋದರತ್ವ ಸಂವಾದ ಈ ಜಗತ್ತಿಗೆ ಮಾದರಿಯಾಗಬಹುದು

ಸಂತ ಆಂದ್ರೆಯರ ಹಬ್ಬದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಸಂಪ್ರದಾಯಿಕವಾಗಿ ಎಕ್ಯುಮೆನಿಕಲ್ ಪೆಟ್ರಿಯಾರ್ಕ್ ಬರ್ತಲೋಮಿಯೋ ಅವರಿಗೆ ಹಬ್ಬದ ಶುಭಾಶಯಗಳು ಅನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಕ್ರೈಸ್ತರ ಒಗ್ಗಟ್ಟಿನ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಕ್ರೈಸ್ತ ಸೋದರತ್ವ ಸಂವಾದ ಈ ಜಗತ್ತಿಗೆ ಮಾದರಿಯಾಗಬಹುದು ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಸಂತ ಆಂದ್ರೆಯರ ಹಬ್ಬದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಸಂಪ್ರದಾಯಿಕವಾಗಿ ಎಕ್ಯುಮೆನಿಕಲ್ ಪೆಟ್ರಿಯಾರ್ಕ್ ಬರ್ತಲೋಮಿಯೋ ಅವರಿಗೆ ಹಬ್ಬದ ಶುಭಾಶಯಗಳು ಅನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಕ್ರೈಸ್ತರ ಒಗ್ಗಟ್ಟಿನ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಕ್ರೈಸ್ತ ಸೋದರತ್ವ ಸಂವಾದ ಈ ಜಗತ್ತಿಗೆ ಮಾದರಿಯಾಗಬಹುದು ಎಂದು ಹೇಳಿದ್ದಾರೆ.

ಆರ್ಥೋಡಾಕ್ಸ ಕ್ರೈಸ್ತ ಪಂಗಡಗಳ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಅನೇಕ ಶತಮಾನಗಳಿಂದಲೂ ಈ ಕ್ರೈಸ್ತ ಪಂಗಡಗಳು ಕಥೋಲಿಕ ಧರ್ಮಸಭೆಯೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುತ್ತಾ ಬಂದಿವೆ. ನಮ್ಮ ಆರಾಧನಾ ವಿಧಿ ಶೈಲಿಯೂ ವಿಭಿನ್ನವಾದರೂ ಸಹ ಅಂತಿಮವಾಗಿ ನಾವು ಆರಾಧಿಸುತ್ತಿರುವುದು ಈ ಜಗತ್ತಿನ ರಕ್ಷಕರಾದ ಪ್ರಭು ಯೇಸು ಕ್ರಿಸ್ತರನ್ನು ಎಂದು ವಿಶ್ವಗುರು ಫ್ರಾನ್ಸಿಸ್ವರು ಹೇಳಿದ್ದಾರೆ.

ಕ್ರೈಸ್ತ ಐಕ್ಯತೆ ಎಂಬುದು ಇಂದು ವಿವಿಧ ದೃಷ್ಟಿಕೋನಗಳು ಹಾಗೂ ಭಿನ್ನಾಭಿಪ್ರಾಯಗಳಿಂದ ಒಡೆದು ಹೋಗಿರುವ ಈ ಜಗತ್ತಿಗೆ ಮಾದರಿಯಾಗಬಹುದು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ. ಜಗತ್ತು ಎಂದು ಯುದ್ಧಗಳಿದ್ದ ತುಂಬಿ ಹೋಗಿದೆ. ಜಗತ್ತಿನಲ್ಲಿ ಯಾವುದೇ ಸಮಸ್ಯೆಗೆ ಸಂವಾದ ಎಂಬ ಪರಿಹಾರವೂ ಮರೆಯಾಗಿದೆ. ಹೀಗಾಗಿ, ಕ್ರೈಸ್ತರು ಹಬ್ಬದ ಸಮಸ್ಯೆಗಳನ್ನು ಸಂಭಾತದ ಮೂಲಕ ಭಾಗಹರಿಸಿಕೊಂಡು ಆ ಮೂಲಕ ಇಡೀ ವಿಶ್ವಕ್ಕೆ ಮಾದರಿಯನ್ನು ರೂಪಿಸಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವ್ಯಾಟಿಕನ್ ನಗರದ ಕ್ರೈಸ್ತ ಐಕ್ಯತೆ ಉತ್ತೇಜನೆ ಪೀಠದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಕರ್ಟ್ ಕೋಚ್ ಅವರು ಪೋಪ್ ಫ್ರಾನ್ಸಿಸ್ ಅವರ ಸಂದೇಶವನ್ನು ಎಕ್ಯುಮೆನಿಕಲ್ ಪೆಟ್ರಿಯಾರ್ಕ್ ಬರ್ತಲೋಮಿಯೋ ಅವರಿಗೆ ವೈಯಕ್ತಿಕವಾಗಿ ನೀಡಿದ್ದಾರೆ.

29 November 2024, 21:03