ಹುಡುಕಿ

ಸುವಾರ್ತಾ ಪ್ರಸಾರ ಹಾಗೂ ವಲಸಿಗರ ನೆರವಿಗಾಗಿ ಇಎಸ್'ಎನ್'ಇ ಟಿವಿ ಸಂಸ್ಥೆಯನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್

ಅಮೇರಿಕಾದಲ್ಲಿರುವ ಸ್ಪ್ಯಾನಿಷ್ ಭಾಷೆಯ ಕಥೋಲಿಕ ಟಿವಿ ಸಂಸ್ಥೆಯಾದ ಇಎಸ್'ಎನ್'ಇ ಟಿವಿ ಸಂಸ್ಥೆಯ ಪ್ರತಿನಿಧಿಗಳನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದರು. ಇದೇ ವೇಳೆ ಈ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೊಯೆಲ್ ಡಯಾಜ್ ಅವರೂ ಸಹ ಇದ್ದರು.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಅಮೇರಿಕಾದಲ್ಲಿರುವ ಸ್ಪ್ಯಾನಿಷ್ ಭಾಷೆಯ ಕಥೋಲಿಕ ಟಿವಿ ಸಂಸ್ಥೆಯಾದ ಇಎಸ್'ಎನ್'ಇ ಟಿವಿ ಸಂಸ್ಥೆಯನ್ನು ಅವರ ಸುವಾರ್ತಾ ಪ್ರಸಾರ ಕಾರ್ಯಗಳಿಗಾಗಿ ಹಾಗೂ ವಲಸಿಗರಿಗೆ ಅದು ನೀಡುತ್ತಿರುವ ನೆರವಿಗಾಗಿ ಶ್ಲಾಘಿಸಿದ್ದಾರೆ.

ಅಮೇರಿಕಾದಲ್ಲಿರುವ ಸ್ಪ್ಯಾನಿಷ್ ಭಾಷೆಯ ಕಥೋಲಿಕ ಟಿವಿ ಸಂಸ್ಥೆಯಾದ ಇಎಸ್'ಎನ್'ಇ ಟಿವಿ ಸಂಸ್ಥೆಯ ಪ್ರತಿನಿಧಿಗಳನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದರು. ಇದೇ ವೇಳೆ ಈ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೊಯೆಲ್ ಡಯಾಜ್ ಅವರೂ ಸಹ ಇದ್ದರು.

"ಈ ಕಥೋಲಿಕ ಟಿವಿ ಎಂಬುದು ಒಂದು ಕನಸಾಗಿದ್ದು, ಅದು ದೇವರಿಂದ ಸ್ಪೂರ್ತಿ ಪಡೆದ ಕನಸಾಗಿದೆ. ಆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲರ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಈ ಟಿವಿ ಸಂಸ್ಥೆಯು ಮಾಡುತ್ತಿರುವ ಸುವಾರ್ತಾ ಪ್ರಸಾರ ಕಾರ್ಯಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಸಂಸ್ಥೆಯು ತನ್ನದೇ ವಿಭಿನ್ನ ನೆಲೆಗಳಲ್ಲಿ ಸುವಾರ್ತಾ ಪ್ರಸಾರ ಕಾರ್ಯವನ್ನು ಮುಂದುವರೆಸುತ್ತಿದೆ. ಇದರ ಜೊತೆಗೆ ವಲಸಿಗರ ಕಷ್ಟ-ಕಾರ್ಪಣ್ಯಗಳನ್ನು ಹಾಗೂ ಅವರ ನೋವುಗಳನ್ನು ಬೆಳಕಿಗೆ ತರುವಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸಿದೆ" ಎಂದು ಹೇಳಿದರು.

"ಇಂದಿನ ಕಾಲಘಟ್ಟದಲ್ಲಿ ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಸೇವೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಹೇಳಿದ ಮಾತುಗಳನ್ನು ಕೊಂಚ ಮಟ್ಟಿಗಾದರೂ ಈ ಸಂಸ್ಥೆಯು ಮಾಡುತ್ತಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

28 November 2024, 16:27