ಪೋಪ್ ಫ್ರಾನ್ಸಿಸ್: ಕುಟುಂಬಗಳು ಹಾಗೂ ಮನೆಗಳು ಜಪಸರದ ಸೌಂದರ್ಯವನ್ನು ಮರು ಅನ್ವೇಷಿಸಬೇಕು

ಜಪಸರ ಮಾತೆಯ ಭಾವಚಿತ್ರವು ಇಟಲಿಯ ಪೊಂಪೆಯಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ 150 ವರ್ಷಗಳ ವರ್ಷಾಚರಣೆಯ ವೇಳೆ ವಿಶ್ವಗುರು ಫ್ರಾನ್ಸಿಸ್ ಅವರು ಕುಟುಂಬಗಳು ಹಾಗೂ ಮನೆಗಳು ಜಪಸರದ ಸೌಂದರ್ಯವನ್ನು ಮರು ಅನ್ವೇಷಿಸಬೇಕು ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಜಪಸರ ಮಾತೆಯ ಭಾವಚಿತ್ರವು ಇಟಲಿಯ ಪೊಂಪೆಯಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ 150 ವರ್ಷಗಳ ವರ್ಷಾಚರಣೆಯ ವೇಳೆ ವಿಶ್ವಗುರು ಫ್ರಾನ್ಸಿಸ್ ಅವರು ಕುಟುಂಬಗಳು ಹಾಗೂ ಮನೆಗಳು ಜಪಸರದ ಸೌಂದರ್ಯವನ್ನು ಮರು ಅನ್ವೇಷಿಸಬೇಕು ಎಂದು ಹೇಳಿದ್ದಾರೆ.

"ಜಪಸರ ಎಂಬುದು ಎಲ್ಲರೂ ಸಹ ಪಡೆದುಕೊಳ್ಳಬಹುದಾದ ಸಾಧನವಾಗಿದೆ. ಇದು ಧರ್ಮಸಭೆಯ ಸುವಾರ್ತಾ ಪ್ರಸಾರ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಲು ನಮಗೆ ಮಾದರಿಯಾಗಿದೆ" ಎಂದು ಜಪಸರದ ಕುರಿತು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು.

ಪೊಂಪೇಯಿ ಮಾತೆಯ ಪುಣ್ಯಕ್ಷೇತ್ರಕ್ಕೆ ವಿಶ್ವಗುರುಗಳ ಪ್ರತಿನಿಧಿಯಾಗಿರುವ ಪೊಂಪೆಯಿ ಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ತೋಮಾಸೋ ಕಪುಟೊ ಅವರಿಗೆ ಪತ್ರವನ್ನು ಬರೆದಿರುವ ವಿಶ್ವಗುರು ಫ್ರಾನ್ಸಿಸ್ ಅವರು ಈ ಸಂದೇಶವನ್ನು ನೀಡಿದ್ದಾರೆ.

ಈ ಪತ್ರದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಜಪಸರ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಹಾಗೂ ಅದರ ಸೌಂದರ್ಯವನ್ನು ಶ್ಲಾಘಿಸಿದ್ದಾರೆ. ಜಪಸರವು ನಮ್ಮನ್ನು ಆಧ್ಯಾತ್ಮಿಕವಾಗಿ ದೇವರಲ್ಲಿ ಒಂದುಗೂಡಿಸುತ್ತದೆ ಎಂದಿರುವ ಅವರು ಇದನ್ನು ಮರು ಅನ್ವೇಷಿಸಬೇಕಿರುವುದು ಈ ಕಾಲದ ತುರ್ತಾಗಿದೆ ಎಂದು ಹೇಳಿದ್ದಾರೆ.

10 November 2024, 14:26